ADVERTISEMENT

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌: ಉತ್ತಮ ಆಹಾರವೇ ಔಷಧ –ವೈದ್ಯ ಸಿದ್ದಲಿಂಗೇಶ ಸಾಲಿಮಠ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 16:22 IST
Last Updated 9 ಏಪ್ರಿಲ್ 2022, 16:22 IST
ಸಿದ್ದಲಿಂಗೇಶ ಸಾಲಿಮಠ
ಸಿದ್ದಲಿಂಗೇಶ ಸಾಲಿಮಠ   

ಹುಬ್ಬಳ್ಳಿ: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಪ್ರತಿಯೊಬ್ಬರೂ ಆರೋಗ್ಯ, ಉಡುಗೆ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ನಗರದ ಕಿಮ್ಸ್‌ ವೈದ್ಯ ಸಿದ್ದಲಿಂಗೇಶ ಸಾಲಿಮಠ ಹೇಳಿದರು.

ಶನಿವಾರ ‘ಪ್ರಜಾವಾಣಿ ಫೇಸ್‌ಬುಕ್‌ ಲೈವ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸಾಧ್ಯವಾದಷ್ಟು ತೆಳುವಾದ, ಬಿಳಿ ಹಾಗೂ ತಿಳಿ ವರ್ಣದ ಸಡಿಲವಾದ ಬಟ್ಟೆಗಳನ್ನು ಹಾಕಬೇಕು. ತಾಪ ಹೆಚ್ಚಾಗುವುದರಿಂದ ದೇಹದ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ ನಾಲ್ಕು ಲೀಟರ್‌ ನೀರು ಕುಡಿಯಬೇಕು. ಬೇಸಿಗೆಯಲ್ಲಿ ದೂಳಿನ ಪ್ರಮಾಣವೂ ಹೆಚ್ಚಿರುವುದರಿಂದ ಮಾಸ್ಕ್‌ ಬಳಸುವುದು ಸುರಕ್ಷಿತ’ ಎಂದರು.

‘ಸಾಧ್ಯವಾದಷ್ಟು ಬೆಳಿಗ್ಗೆ 10 ಗಂಟೆ ಒಳಗೆ ಹಾಗೂ ಸಂಜೆ 5 ಗಂಟೆಯ ಮೇಲೆ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಿ. ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರು ಮೇಲಿಂದ ಮೇಲೆ ನೀರು ಕುಡಿಯುವ ಬಗ್ಗೆ ಗಮನ ಹರಿಸಬೇಕು. ಬಿಸಿಲಿನಲ್ಲಿ ಓಡಾಡಿ ಬಂದಿದ್ದರೆ ನಿಂಬೆಹಣ್ಣಿನ ಪಾನಕ, ಮಜ್ಜಿಗೆ ಕುಡಿಯಬೇಕು. ತರಕಾರಿ ಹಾಗೂ ಹಣ್ಣುಗಳನ್ನು ತಿನ್ನಬೇಕು. ಬೇಸಿಗೆಯ ಸಮಯದಲ್ಲಿ ಮಾಂಸಹಾರ ಕಡಿಮೆ ತಿನ್ನಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.