ADVERTISEMENT

ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದಿಂದ ಸ್ಮಶಾನ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 24 ಮೇ 2019, 9:32 IST
Last Updated 24 ಮೇ 2019, 9:32 IST
ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವಿಜಯ್ ಲಕ್ಕುಂಡಿ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು–
ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನದ ವಿಜಯ್ ಲಕ್ಕುಂಡಿ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು–   

ಹುಬ್ಬಳ್ಳಿ:ಡಾ. ನಾನಾ ಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ಭಾನುವಾರ ಹುಬ್ಬಳ್ಳಿಯಲ್ಲಿ ಸ್ಮಶಾನ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಿದೆ.

ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಪ್ರತಿಷ್ಠಾನದ ವಿಜಯ್ ಲಕ್ಕುಂಡಿ, ಈಶ್ವರನಗರ, ಜನ್ನತ್ ನಗರ ಸೇರಿ ವಿವಿಧ ಭಾಗಗಳ 15 ಸ್ಮಶಾನಗಳ ಸ್ವಚ್ಚತಾ ಕಾರ್ಯಕ್ಕೆ ಬೆಳಿಗ್ಗೆ 10 ಗಂಟೆಗೆ ಚಾಲನೆ ನೀಡಲಾಗುತ್ತದೆ. ವಿವಿಧ ‌ಜಿಲ್ಲೆಗಳ ಸುಮಾರು ಮೂರು ಸಾವಿರ ಜನ ಭಾಗವಹಿಸುವರು ಎಂದರು.

ಈಶ್ವರ ನಗರದ ಸ್ಮಶಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರತಿಷ್ಠಾನದ ವತಿಯಿಂದ ಹಾನಗಲ್ ತಾಲ್ಲೂಕಿನ ತಿಳುವಳಿ ಹಾಗೂ ಲಿಂಗಸೂರಿನಲ್ಲಿ ಕೊಳವೆ ಬಾವಿ‌ಮರು‌ ಪೂರಣ ಕಾರ್ಯಕ್ರಮ ಮೇ 27ರಂದು ನಡೆಯಲಿದೆ.

ADVERTISEMENT

ರೈತರಿಗೆ ಮರು ಪೂರಣದ ಬಗ್ಗೆ ಮಾಹಿತಿ‌ನೀಡುವುದು, ಸ್ಥಗಿತಗೊಂಡಿರುವ ಕೊಳವೆ ಬಾವಿ ಬಳಕೆಗೆ ಯೋಗ್ಯಗೊಳಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.