ADVERTISEMENT

ಧಾರವಾಡ | ಮಳೆ: ರಸ್ತೆಯಲ್ಲಿ ನೀರು, ಸಂಚಾರ ತಾಪತ್ರಯ

​ಪ್ರಜಾವಾಣಿ ವಾರ್ತೆ
Published 23 ಮೇ 2024, 16:21 IST
Last Updated 23 ಮೇ 2024, 16:21 IST
ಧಾರವಾಡದ ಕೆಎಂಎಫ್‌ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ವಾಹನಗಳ ಸಂಚಾರ ಪ್ರಜಾವಾಣಿ ಚಿತ್ರ
ಧಾರವಾಡದ ಕೆಎಂಎಫ್‌ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ವಾಹನಗಳ ಸಂಚಾರ ಪ್ರಜಾವಾಣಿ ಚಿತ್ರ    

ಧಾರವಾಡ: ನಗದಲ್ಲಿ ಗುರುವಾರ ಮಳೆ ಸುರಿಯಿತು. ಕೆಎಂಎಫ್‌ ಮುಂಭಾಗದ ರಸ್ತೆ, ಎನ್‌ಟಿಟಿಎಫ್‌ ಎದುರಿನ ರಸ್ತೆ (ಬಿಆರ್‌ಟಿಎಸ್‌ ಮಾರ್ಗ) ಸಹಿತ ಕೆಲವೆಡೆ ನೀರು ನಿಂತು ಕೆಲಹೊತ್ತು ಸಂಚಾರಕ್ಕೆ ತಾಪತ್ರಯವಾಯಿತು. ಸಂಜೆ ಸುಮಾರು 20 ನಿಮಿಷ ಮಳೆ ಬಿರುಸಾಗಿ ಸುರಿಯಿತು. ಗುಡುಗು, ಮಿಂಚು, ಗಾಳಿ ಆರ್ಭಟ ಇತ್ತು. ಕೆಎಂಎಫ್‌ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ನೀರನ್ನು ಪಾಲಿಕೆ ಸಿಬ್ಬಂದಿ ಚರಂಡಿಗೆ ಹೊರಳಿಸಿದರು.

ಕೋರ್ಟ್‌ ವೃತ್ತ, ಅಕ್ಕಿಪೇಟೆ ಮಾರುಕಟ್ಟೆ. ಹಾವೇರಿ ಪೇಟೆ ನಗರ ರಸ್ತೆಗಳಲ್ಲಿ ನೀರು ನಿಂತಿತ್ತು. ಜನರು, ವಾಹನಗಳ ಓಡಾಟಕ್ಕೆ ತೊಂದರೆಯಾಯಿತು. ಕೆಲವೆಡೆ ಚರಂಡಿ ತುಂಬಿ ನೀರು ರಸ್ತೆಯಲ್ಲಿ ಹರಿಯಿತು. ಸಿಟಿ ಬಸ್‌ ನಿಲ್ದಾಣದ (ಸಿಬಿಟಿ) ಬಳಿಯ ಆಲದ ಮರ ದೊಡ್ಡ ಟೊಂಗೆ ಮುರಿದು ಬಿದ್ದು ಲಗೇಜ್‌ ವ್ಯಾನ್‌, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡವು

ಮಹಾನಗರ ಪಾಲಿಕೆ ಮತ್ತು ಅರಣ್ಯ ಸಿಬ್ಬಂದಿ ಟೊಂಗೆ ತೆರವುಗೊಳಿಸಿದರು. ಜಯನಗರದ ಗಲಗಲಿ ಆಸ್ಪತ್ರೆ ಸಮೀಪ ಮರದ ಕೊಂಬೆ ಮುರಿದುಬಿದ್ದಿತ್ತು.

ADVERTISEMENT
ಧಾರವಾಡದ ಅಕ್ಕಿಪೇಟೆಯ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು
ಧಾರವಾಡದ ಜಯನಗರದ ಗಲಗಲಿ ಆಸ್ಪತ್ರೆ ಸಮೀಪದ ಮರದ ಕೊಂಬೆ ಮುರಿದು ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.