ನವಲಗುಂದ: ವೈಭವದ ಹೋಳಿ ಹುಣ್ಣಿಮೆ ಆಚರಣೆಗೆ ನವಲಗುಂದ ಮತ್ತೊಮ್ಮೆ ಸಿದ್ಧಗೊಂಡಿದೆ. ಹೋಳಿ ಹುಣ್ಣಿಮೆ ಅಂದರೆ ರಂಗು ರಂಗಿನ ಬಣ್ಣ ಎರಚಿ ಮೋಜಿಗಾಗಿ ಅಲ್ಲದೇ ಶೃದ್ಧಾ ಭಕ್ತಿಯಿಂದಲೂ ಆಚರಣೆ ಗೊಳ್ಳಲಿದೆ ಎಂಬುದಕ್ಕೆ ರಾಜ್ಯ ಹೊರರಾಜ್ಯದೆಲ್ಲೆಡೆ ಖ್ಯಾತಿ ಪಡೆದ ಇಲ್ಲಿನ ರಾಮಲಿಂಗ ಕಾಮದೇವ ವಿಶಿಷ್ಟವಾದದು.
ಸೋಮವಾರ ರಾತ್ರಿ ಪ್ರತಿಷ್ಠಾಪನೆಗೊಂಡಿದ್ದು, ಮಾರ್ಚ್ 11ರಿಂದ 15ರಂದು ದರ್ಶನ ದೊರೆಯಲಿದೆ.
ಭಕ್ತಿಯಿಂದ ಭಜಿಸುವವರಿಗೆ ಈತ ಅಕ್ಷರಶ: ಕಾಮಧೇನು ಕಲ್ಪವೃಕ್ಷ ಈ ಕಾಮಣ್ಣನಿಗೆ ಇಂಥ ಸಿದ್ಧಿ ಲಭಿಸಿದುದು ಒಬ್ಬ ತಪೋನರತ ಸಿದ್ಧ ಪುರುಷನ ಸಿದ್ಧ ಹಸ್ತದಿಂದ. ಎಲ್ಲೆಡೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುತ್ತಿರುವುದನ್ನು ಗಮನಿಸಿ ಈ ಮಹಿಮಾ ಪುರುಷ ಕಾಮಣ್ಣ ಕೇವಲ ಸಾಂಕೇತಿಕ ಮೂರ್ತಿಯಾಗದೇ ಆರಾಧಿಸುವವರಿಗೆ ಆರಾಧ್ಯ ದೈವವಾಗಬೆಕು ಎಂಬ ಅಪೇಕ್ಷೆಯಿಂದ ವಿಶಿಷ್ಟ ಮೂರ್ತಿ ರಚನೆಯ ಸಂಕಲ್ಪಕ್ಕೆ ಮುಂದಾದ.
101 ಗಿಡಮೂಲಿಕೆಗಳಿಂದ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪ. ಆದರೆ ದೊರೆತಿದ್ದು, 100 ಮಾತ್ರ. ಅದರಲ್ಲಿಯೇ ಮೂರ್ತಿಯನ್ನು ಮಾಡಿ ಒಂದು ರಂಧ್ರವನ್ನು ಬಿಟ್ಟ ಎಂಬ ನಂಬಿಕೆ ಇದೆ. ಈ ಮೂರ್ತಿಯ ಮೂಲ ಸವಣೂರು ಎಂದು ಹೇಳುತ್ತಾರೆ. ಆದರೆ ನೆಲೆ ನಿಂತು ಜನಪ್ರಿಯಗೊಂಡಿದ್ದು, ನವಿಲುಗುಂದ ನಗರದ ಭಾಗ್ಯ ಎನ್ನಬಹುದು.
ಮದುವೆ, ಮಕ್ಕಳು, ಸಂತಾನ ಭಾಗ್ಯ, ಮನೆ, ಆಸ್ತಿ, ಸಂಪತ್ತು, ಆರೋಗ್ಯ ಸೇರಿದಂತೆ ಬರುವ ಭಕ್ತರು ಬೇಡಿಕೊಂಡು ಬೆಳ್ಳಿಯ ತೊಟ್ಟಿಲು, ಬಾಸಿಂಗ, ಛತ್ರಿ, ಚಾಮರ ನೀಡುತ್ತಾರೆ. ಇದುವೇ ಕ್ವಿಂಟಲ್‌ಗಿಂತ ಅಧಿಕವಾಗುತ್ತದೆ.
ಪೂಜಾರಿಯಲ್ಲದ ದೇವರು: ಜಗತ್ತಿನ ಎಲ್ಲ ದೇವಸ್ಥಾನದ ದೇವರಿಗೆ ಪೂಜಾರಿ ಇರುತ್ತಾರೆ. ಆದರೆ ಈ ದೇವರಿಗೆ ಭಕ್ತರೇ ಪೂಜಾರಿಗಳು. ಹರಕೆ ಹೊತ್ತು, ಪೂಜೆ ಮಾಡಿದರೆ ಮುಗಿಯಿತು. ಅಲ್ಲದೇ ಈ ಕಾಮಣ್ಣ ಭಾವೈಕ್ಯದ ಸಂಕೇತ. ಹಿಂದೂ–ಮುಸ್ಲಿಂರು ಶ್ರದ್ಧಾ–ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ ಎನ್ನುವುದೇ ವಿಶೇಷ.
ನವಲಗುಂದ ರಾಮಲಿಂಗ ಈ ಕಾಮಣ್ಣ ಇಂದಿನಿಂದ ದರ್ಶನಕ್ಕೆ ಲಭ್ಯ ಭಾವೈಕ್ಯದ ಕಾಮಣ್ಣ: ಪೂಜಾರಿಯಲ್ಲದ ದೇವರು
ನವಲಗುಂದ ನಗರದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆಗೊಳ್ಳುವ ಕಾಮದೇವ ಕಲಿಯುಗದ ಕಾಮಧೇನು ಎಂದೇ ಪ್ರಸಿದ್ಧರಘುನಾಥ ನಡುವಿನಮನಿ ಮಹದಾಯಿ ಹೋರಾಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.