ADVERTISEMENT

ಕುಂದಗೋಳ | ‘ಮರ್ಯಾದೆಗೇಡು ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗಲಿ’

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:48 IST
Last Updated 31 ಡಿಸೆಂಬರ್ 2025, 4:48 IST
ಕುಂದಗೋಳ ತಾಲ್ಲೂಕು ಚಲವಾದಿ ಸಮಾಜ ಹಿತರಕ್ಷಣಾ ಸಮಿತಿಯಿಂದ ಶಿರಸ್ತೆದಾರ ಮಹೇಶ ಶಾನಬಾಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು
ಕುಂದಗೋಳ ತಾಲ್ಲೂಕು ಚಲವಾದಿ ಸಮಾಜ ಹಿತರಕ್ಷಣಾ ಸಮಿತಿಯಿಂದ ಶಿರಸ್ತೆದಾರ ಮಹೇಶ ಶಾನಬಾಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು   

ಕುಂದಗೋಳ: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆಗೆ ಬಲಿಯಾದ ಮಾನ್ಯ ಹಾಗೂ ಯುವಕನ ಕುಟುಂಬದ ಮೇಲೆ ಹಲ್ಯೆ ಮಾಡಿದ ಆರೋಪಿಗಳನ್ನು ತ್ವರಿತ ನ್ಯಾಯಾಲಯದ ಮೂಲಕ ಗಲ್ಲು ಶಿಕ್ಷೆ ವಿಧಿಸುವಂತೆ ತಾಲ್ಲೂಕು ಚಲವಾದಿ ಸಮಾಜ ಹಿತರಕ್ಷಣಾ ಸಮಿತಿಯಿಂದ ಶಿರಸ್ತೆದಾರ ಮಹೇಶ ಶಾನಬಾಳ ಮೂಲಕ ಮಂಗಳವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಮುಖಂಡರಾದ ಗುರುನಾಥ ಚಲವಾದಿ, ಸುರೇಶ ಮಾಕಪ್ಪನವರ, ಪರಶುರಾಮ ವೀರನಾಯ್ಕರ, ಅಡಿವೆಪ್ಪ ಹೆಬಸೂರ ಘಟನೆ ಕುರಿತು ಮಾತನಾಡಿ ಯುವತಿಯ ಹತ್ಯೆ ಮಾಡಿ, ಯುವಕ ವಿವೇಕಾನಂದ ಮಾದರ ಹಾಗೂ ಅವರ ಕುಟುಂಬದ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇಂಥವರನ್ನು ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ ಪುತ್ತಳಿಯಿಂದ ತಹಶಿಲ್ದಾರ್‌ ಕಚೇರಿ ವರೆಗೆ ಪ್ರತಿಭಟನೆ ಮೂಲಕ ಆಗಮಿಸಿ ಮನವಿ ಸಲ್ಲಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಲೋಕೇಶ್ ಬೇವಿನಮರದ, ಶರೀಫ ಜೋಗಮ್ಮನವರ, ರವಿ ದಾನಮ್ಮನವರ, ಕಾಂತೇಶ ದೊಡ್ಡಮನಿ, ಮೈಲಾರಪ್ಪ ಲಂಗಟದ, ಫಕ್ಕಿರೇಶ ಮೂಕಾಶಿ, ರಮೇಶ್ ಚಲವಾದಿ, ಅಜ್ಜಪ್ಪ ತಳವಾರ, ಪರಶುರಾಮ ಚಲವಾದಿ, ಬಸವರಾಜ ಗುಡೆನಕಟ್ಟಿ, ಚಂದ್ರು ಕಾಳೆ, ಮಂಜುನಾಥ ಕಾಲವಾಡ, ರವಿ ಕಾಳಿ, ನೀಲಪ್ಪ ಹರಿಜನ, ಗೋವಿಂದಪ್ಪ ಕಾಳಿ ಮತ್ತಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.