
ಹುಬ್ಬಳ್ಳಿ: ಇಲ್ಲಿನ ಲಿಡಕರ್ ಭವನದಲ್ಲಿ ಸಮಗಾರ (ಚಮ್ಮಾರ) ಹರಳಯ್ಯ ಸಮಾಜದ ಸಮಾನ ಮನಸ್ಕರ ಚಿಂತನ ಮಂಥನ ಸಭೆ ಭಾನುವಾರ ಜರುಗಿತು.
ಸಮಾಜದ ರಾಜ್ಯ ಸಂಘದ ನಾಯಕರು ಸಮುದಾಯವನ್ನು ಮುನ್ನಡೆಸಲಾಗದ, ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾರದಷ್ಟು ಅಸಮರ್ಥರಾಗಿದ್ದಾರೆ ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಅವಧಿ ಮುಗಿದ ರಾಜ್ಯ ಸಂಘದ ಪದಾಧಿಕಾರಿಗಳನ್ನು ಕೆಳಗಿಳಿಸಿ, ಸಮಾಜದ ಹಕ್ಕಿನ ಹೋರಾಟಕ್ಕೆ ಮುಂದಾಗಲು ಒಮ್ಮತದಿಂದ ಸಮ್ಮತಿಸಲಾಯಿತು. ಸಂಗ್ರಹವಾಗಿರುವ ರಾಜ್ಯ ಸಂಘದ ಸದಸ್ಯತ್ವದ ಹಣವನ್ನು ಬಡ್ಡಿ ಸಹಿತ ದಾಖಲೆ ಪಡೆಯಲು ತೀರ್ಮಾನಿಸಲಾಯಿತು.
ಗುರುನಾಥ ಉಳ್ಳಿಕಾಶಿ, ಎಂ.ಆರ್. ಸೌದಾಗರ, ವಸಂತ ಮನಗೂಳಿ, ಸಂತೋಷ ಮಾನೆ, ಸಾಗರ ಬೆಟಗೇರಿ, ಅಶೋಕ ಭಂಡಾರಿ, ರಮೇಶ ದೇವಮಾನೆ, ಪಿ.ಪಿ. ಉಳ್ಳಿಕಾಶಿ, ಸಂದೀಪ ಮಿಶ್ರೀಕೋಟಿ, ಸದಾನಂದ ನಿಪ್ಪಾಣಿಕರ, ಚಿದು ಗಾಮನಗಟ್ಟಿ, ಪ್ರಕಾಶ ಮೊರಬ, ಬಿ.ಎಲ್. ಸಣ್ಣಕ್ಕಿ, ಬ.ದು. ಕುಂದರಗಿ, ಸುರೇಶ ಬೆಟಗೇರಿ, ಸಂತೋಷ ಪಾವಸ್ಕರ, ಜಗನ್ನಾಥ ಅಗಸಿಮನಿ, ಪ್ರಭು ಅಣ್ಣಿಗೇರಿ, ಸೋಮು ಸೌದತ್ತಿ, ಡಿ.ಕೆ. ಬೆಣಗಿ ಸೇರಿದಂತೆ 120ಕ್ಕೂ ಅಧಿಕ ಜನರು ಭಾಗವಹಿಸಿ, ಸಮಾಜವನ್ನು ಮುನ್ನಡೆಸುವ ನಿಟ್ಟಿನಲ್ಲಿ ತಮ್ಮ ಸಲಹೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.