ಹುಬ್ಬಳ್ಳಿ: ವೀರ ಪುಲಿಕೇಶಿ ಕನ್ನಡ ಬಳಗದಿಂದ ಗುರುವಾರ ನಡೆದ ಮನೆ–ಮನೆಯಲ್ಲಿ ಕನ್ನಡದ ಕಂಪು 207ನೇ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೆಂಕಟೇಶ ಮರೆಗುದ್ದಿ ಅವರು ತಮ್ಮ ತಂದೆ–ತಾಯಿ ಹೆಸರಲ್ಲಿ ₹1 ಲಕ್ಷ ದತ್ತಿ ನಿಧಿಯನ್ನು ಕಸಪಾಗೆ ನೀಡಿದರು. ಎಂ. ವೆಂಕಟೇಶ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಬೇಕೆಂದು ಒತ್ತಾಯಿಸಿದರು.
ಛಾಯಾಗ್ರಾಹಕ ಶಶಿ ಸಾಲಿ, ಕೆ.ಎಸ್.ಕೌಜಲಗಿ, ಎಸ್.ಕೆ.ಆದಪ್ಪನವರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ ಹಾಗೂ ಸುಮಂಗಲಾ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಸುನಿಲ್ ಪತ್ರಿ, ನಾರಾಯಣ ಭಾದ್ರಿ, ಸುನಿತಾ ಹುಬ್ಳಿಕರ, ಮೈತ್ರಾ ನೀಲಪ್ಪನವರ, ಭಾಗ್ಯ ಮೈಸೂರು, ಜ್ಯೋತಿ ಖಜ್ಜಿಶೆಟ್ಟರ, ಎಸ್.ಆರ್. ಆಶಿ, ಗೀತಾ ಮರೆಗುದ್ದಿ, ಮಯೂರ ಮರೆಗುದ್ದಿ, ಮೇಘಾ ಮರೆಗುದ್ದಿ, ವಿದ್ಯಾ ವಂಟಮುರಿ, ಮಹಾಂತೇಶ ನರೇಗಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.