ಹುಬ್ಬಳ್ಳಿ: ಗಣೇಶಮೂರ್ತಿ ವಿಸರ್ಜನೆ ವೇಳೆ ಪ್ರಿಯದರ್ಶಿನಿ ಕಾಲೊನಿ ನಿವಾಸಿ ಮಳಿಯಪ್ಪ ಪಿ. ಅವರ ಬಲಗಣ್ಣಿಗೆ ಪಟಾಕಿ ಸಿಡಿದು ತೀವ್ರ ಗಾಯಗೊಂಡಿದ್ದು, ನಗರದ ಡಾ.ಎಂ.ಎಂ.ಜೋಶಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿಯನ್ನು ಕಳೆದ ಭಾನುವಾರ ವಿಸರ್ಜಿಸಲು ಹೊತ್ತುಕೊಂಡು ಹೋಗುತ್ತಿದ್ದರು. ಆ ವೇಳೆ ಹಚ್ಚಿದ್ದ ಪಟಾಕಿಯ ಕಿಡಿ ಅವರ ಬಲಗಣ್ಣಿಗೆ ಬಡಿದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
‘ಪ್ರಿಯದರ್ಶಿನಿ ಕಾಲೊನಿಯಲ್ಲಿ ಪಾನ್‌ಶಾಪ್ ಇಟ್ಟುಕೊಂಡು ಕುಟುಂಬ ನಿರ್ವಹಿಸುತ್ತಿದ್ದೆ. ಪಟಾಕಿ ಸಿಡಿದು ಬಲಗಣ್ಣು ತೀವ್ರವಾಗಿ ಗಾಯಗೊಂಡಿದ್ದು, ದೃಷ್ಟಿ ಬರುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದಾರೆ. ಹಬ್ಬದ ಖುಷಿಯಲ್ಲಿ ಹಚ್ಚಿದ ಪಟಾಕಿ ಶಾಶ್ವತ ದೃಷ್ಟಿ ಕಳೆದುಕೊಳ್ಳುವಂತೆ ಮಾಡಿದೆ’ ಎಂದು ಗಾಯಾಳು ಮಳಿಯಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.