ಹುಬ್ಬಳ್ಳಿ: ತಾಲ್ಲೂಕಿನ ವಿವಿಧೆಡೆ ಮನೆಗಳ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಗ್ರಾಮೀಣ ಠಾಣೆ ಪೊಲೀಸರು, ₹9 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಂದಗೋಳ ತಾಲ್ಲೂಕಿನ ಗುಡಗೇರಿ ಗ್ರಾಮದವರಾದ ಶ್ರೀಧರ ಬಿಂಜಡಗಿ, ಹೇಮಂತ ಧರೆಣ್ಣವರ ಮತ್ತು ಗೆಬಿ ಫರ್ನಾಂಡೀಸ್ ಬಂಧಿತರು.
ತಾಲ್ಲೂಕಿನ ತಾರಿಹಾಳ ಗ್ರಾಮದ ಸೈದುಸಾಬ ನದಾಫ್ ಅವರ ಮನೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದರು. ಅದೇ ರೀತಿ ಅಂಚಗೇರಿ ಗ್ರಾಮದ ಗೋಡಾವನ್ ಆಶ್ರಯ ಬಡಾವಣೆಯಲ್ಲಿನ ಮಂಜುನಾಥ ಜಗಲಾರ ಅವರ ಮನೆಯಲ್ಲಿ ಇಟ್ಟಿದ್ದ ₹₹1.42 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು. ಪ್ರಕರಣ ದಾಖಲಾಗಿತ್ತು.
ಇನ್‌ಸ್ಪೆಕ್ಟರ್ ಮುರಗೇಶ ಚಣ್ಣನವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಪಿಎಸ್ಐ ಸಚಿನ್ ಆಲಮೇಲಕರ್, ಎಎಸ್ಐ ಎನ್.ಎಂ. ಹೊನ್ನಪ್ಪನವರ, ಸಿಬ್ಬಂದಿ ಎ.ಎ. ಕಾಕರ್, ಎಚ್.ಬಿ . ಐಹೋಳೆ, ಎಚ್.ಎಲ್. ಮಲ್ಲಿಗವಾಡ, ಸಂತೋಷ ಚವ್ಹಾಣ, ಚನ್ನಪ್ಪ ಬಳ್ಕೊಳ್ಳಿ, ಮಹಾಂತೇಶ ಮದ್ದಿನ್, ಗಿರೀಶ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.