ADVERTISEMENT

ಹುಬ್ಬಳ್ಳಿ: ನಿವೇಶನ ಕೊಡಿಸುವುದಾಗಿ ₹1.78 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 20:10 IST
Last Updated 5 ನವೆಂಬರ್ 2025, 20:10 IST
<div class="paragraphs"><p> ನಿವೇಶನ ಜಾಗ</p></div>

ನಿವೇಶನ ಜಾಗ

   

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿ– 7ರ ನೋಡಲ್ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ನಿವೇಶನ ಕೊಡಿಸುವುದಾಗಿ ಆರು ಮಂದಿಯಿಂದ ₹1.78 ಕೋಟಿ ಪಡೆದು ವಂಚಿಸಿದ್ದಾನೆ.

ಗೋಕುಲ ರಸ್ತೆಯ ರೇಣುಕಾನಗರದಲ್ಲಿ ನಿವೇಶನ ಕೊಡಿಸುವುದಾಗಿ ಮಹಿಳೆ ಸೇರಿ ಐದು ಮಂದಿ ವೈದ್ಯರಿಗೆ ವಂಚಿಸಿರುವ ಕೇಶ್ವಾಪುರದ ಇಸ್ಮಾಯಿಲ್‌ ಮನಿಯಾರ್‌ ವಿರುದ್ಧ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಆರೋಪಿ ಇಸ್ಮಾಯಿಲ್, ಹುಡಾದಿಂದ ರೇ ಣುಕಾನಗರದಲ್ಲಿ ನಿರ್ಮಿಸಿರುವ ನಿವೇಶ ಕೊಡಿಸುವುದಾಗಿ ಡಾ. ಶಂಭು ಅವರನ್ನು ನಂಬಿಸಿದ್ದ. ಶಂಭು ಅವರ ಸ್ನೇಹಿತರು  ಪ್ರತಿ ನಿವೇಶನಕ್ಕೆ ₹99.12 ಲಕ್ಷ ದಂತೆ ಮೂರು ಕಂತಿನಲ್ಲಿ ಪಾವತಿಸುವ ಒಪ್ಪಂದಕ್ಕೆ ಬಂದು, ಮೊದಲ ಕಂತಿನಲ್ಲಿ ತಲಾ ₹33 ಲಕ್ಷವನ್ನು ಚಲನ್ ಮೂಲಕ ಪಾವತಿಸಿದ್ದರು. ಅದಕ್ಕೆ ಸಂಬಂಧಿಸಿ ಆರೋಪಿ, ಹುಡಾ ಆಯುಕ್ತರ ಸಹಿ ಇರುವ ನಕಲಿ ದಾಖಲೆ ಪತ್ರಗಳನ್ನು ನೀಡಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.