ಪೊಲೀಸ್ – ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ಸ್ಕೂಟಿ ಮೇಲೆ ತೆರಳುತ್ತಿದ್ದ ವಿವಾಹಿತೆ ಮಹಿಳೆಯನ್ನು ಇಬ್ಬರು ಅಡ್ಡಗಟ್ಟಿ ಎಳೆದಾಡಿದ್ದಲ್ಲೆ, ಕೊಲೆ ಬೆದರಿಕೆ ಹಾಕಿರುವ ಘಟನೆ ನಗರದ ನಾಗಶೆಟ್ಟಿಕೊಪ್ಪದ ಕೆರೆಯ ಬಳಿ ಶನಿವಾರ ನಡೆದಿದೆ.
ಶಬರಿನಗರದ ಹುಸೇನಸಾಬ್ ನದಾಫ್ ಹಾಗೂ ಶ್ರೀರಾಮನಗರದ ಶ್ರೀನಿವಾಸ ಶಿರಗುಪ್ಪಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಕೇಶ್ವಾಪುರ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಈ ಹಿಂದೆ ಮಹಿಳೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಹುಸೇನ್‌ಸಾಬ್ ಪರಿಚಯವಾಗಿದ್ದ. ಸ್ನೇಹದಿಂದ ಇದ್ದಾಗ ಮಹಿಳೆಯ ಮೊಬೈಲ್ ನಂಬರ್ ಪಡೆದಿದ್ದ. ನಂತರ ಕರೆ ಮಾಡಿ ಪ್ರೀತಿಸುವಂತೆ ಕಾಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ನಂಬರ್ ಅನ್ನು ಬ್ಲಾಕ್ ಮಾಡಿದ್ದರು. ಕೆಲ ದಿನಗಳ ನಂತರ ಹುಸೇನ್‌ಸಾಬ್ ಸ್ನೇಹಿತ ಮಹಿಳೆಗೆ ಕರೆ ಮಾಡಿ, ಸ್ನೇಹಿತನನ್ನು ಪ್ರೀತಿಸಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ. ಶುಕ್ರವಾರ ಸಂಜೆ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ಮಹಿಳೆಯನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಬಂಧನ: ಇಲ್ಲಿನ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಆಂಧ್ರಪ್ರದೇಶದ ರಾಜಮಂಡ್ರಿಯ ನಾಗಲೆ ಎಂಬಾತನನ್ನು ಬಂಧಿಸಿರುವ ಗೋಕುಲ್ ಠಾಣೆ ಪೊಲೀಸರು, ಅವನಿಂದ ₹47 ಸಾವಿರ ಮೌಲ್ಯದ 8 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.