ADVERTISEMENT

ಹುಬ್ಬಳ್ಳಿ: ರಿವಾಲ್ವರ್‌ ತೋರಿಸಿ ಜೀವ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 3:57 IST
Last Updated 12 ಆಗಸ್ಟ್ 2025, 3:57 IST
   

ಹುಬ್ಬಳ್ಳಿ: ಇಲ್ಲಿನ ಭಾಸೆಲ್ ಮಿಷನ್ ಟ್ರಸ್ಟಿ ಬಲವಂತಕುಮಾರ ಗುಂಡಮಿ ಅವರಿಗೆ, ಅವರ ಸಂಬಂಧಿ ಉಜ್ವಲ ಗುಂಡಮಿ ರಿವಾಲ್ವರ್‌ ತೋರಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಉಜ್ವಲ್, ಕುಡಿದ ಅಮಲಿನಲ್ಲಿ ಬಲವಂತಕುಮಾರ ಅವರ ಮನೆಗೆ ಬಂದು ಟ್ರಸ್ಟ್‌ನ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ತನ್ನ ಬಳಿ ಪರವಾನಗಿ ಪಡೆದ ರಿವಾಲ್ವರ್ ಇದ್ದು, ಶೂಟ್ ಮಾಡುವುದಾಗಿ ರಿವಾಲ್ವರ್‌ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT