ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 21ನೇ ಆಡಳಿತ ಮಂಡಳಿಯ ಅವಧಿಗೆ ಈರೇಶ ಅಂಚಟಗೇರಿ ಮೇಯರ್, ಉಮಾ ಮುಕುಂದ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಪಾಲಿಕೆ ಸಭಾಭವನದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಈರೇಶ ಅಂಚಟಗೇರಿ 50 ಮತ ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಮಯೂರ ಮೋರೆ 35 ಮತ ಪಡೆದರು. ಎಐಎಂಐಎಂ ಅಭ್ಯರ್ಥಿ ನಜೀರ್‌ಅಹ್ಮದ್ ಹೊನ್ಯಾಳ ಮೂರು ಮತ ಪಡೆದರು.
ಉಪಮೇಯರ್ ಸ್ಥಾನದ ಬಿಜೆಪಿಯ ಉಮಾ ಮುಕುಂದ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ದೀಪಾ ನೀರಕಟ್ಟಿ ಅವರನ್ನು 16 ಮತಗಳ ಅಂತರದಿಂದ ಸೋಲಿಸಿದರು. ಉಮಾ ಅವರು 51 ಮತಗಳನ್ನುಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.