ADVERTISEMENT

ದಿಂಗಾಲೇಶ್ವರ ಸ್ವಾಮೀಜಿ ಹೇಳಿದ ಎಂಗೇಜ್‌ಮೆಂಟ್‌–ಮದುವೆ ಕಥೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 11:51 IST
Last Updated 21 ಫೆಬ್ರುವರಿ 2020, 11:51 IST
ದಿಂಗಾಲೇಶ್ವರ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ   

ಹುಬ್ಬಳ್ಳಿ: ಮೂರುಸಾವಿರ ಮಠದಲ್ಲಿ ಫೆ.23 ದು ಸತ್ಯ‌ದರ್ಶನ ಸಭೆ ನಡೆಯಲಿದೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಾಲೇಹೂಸೂರಿನ ದಿಂಗಾಲೇಶ್ವರ‌ ಸ್ವಾಮೀಜಿ ಹೇಳಿದರು.

ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ರುದ್ರಮುನಿ ಸ್ವಾಮಿಗಳ ನಡುವೆ ಭಿನ್ನಮತ ಬಂದಾಗ‌ ಬಗೆಹರಿಸಲು ನಾನು ಬೇಕಿತ್ತು. ಸಮಸ್ಯೆ ಬಗೆಹರಿಸಲು ಬಂದವನನ್ನು‌ ಸಮಸ್ಯೆಗೆ ದೂಡಿದ್ದಾರೆ. ನನ್ನನ್ನು ಸಮಸ್ಯೆಯಿಂದ ಮುಕ್ತಗೊಳಿಸಿ ಎಂದರು.

ಎಲ್ಲವೂ ನ್ಯಾಯಲಯದಲ್ಲೇಬಗೆಹರಿಯಬೇಕು ಎಂದಿಲ್ಲ. ಅಲ್ಲಿ ಬಗೆಹರಿದರೆ ಮಠದ ಗೌರವ ಕಡಿಮೆಯಾಗುತ್ತದೆ. ಸತ್ಯವನ್ನು ಸಮಾಜದ ಮುಂದಿಡಲಿ ಎಂದು ಆಗ್ರಹಿಸಿದರು.

ADVERTISEMENT

‘ಎಂಗೇಜ್‌ಮೆಂಟ್ ಆಗಿದೆ. ಮದುವೆ ದಿನ ನಮ್ಮ ಯಜಮಾನನನ್ನು ಹೊತ್ತುಕೊಂಡು ಹೋಗಿದ್ದಾರೆ. ಅವರಿಗೆ ನನ್ನ ಮೇಲೆಯೇ ಮನಸ್ಸಿದೆ. ಅವರನ್ನು ಬಂಧನದಲ್ಲಿಟ್ಟಿದ್ದಾರೆ. ಅವರನ್ನು ಹೊರಗೆ ಬಿಟ್ಟರೆ ನನ್ನನ್ನೇ ಮದುವೆಯಾಗಲಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.