ರೈಲು
– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಹೆಚ್ಚುವರಿ ದಟ್ಟಣೆ ನಿರ್ವಹಿಸಲು ನೈರುತ್ಯ ರೈಲ್ವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ.
ಎಸ್ಎಸ್ಎಸ್ ಹುಬ್ಬಳ್ಳಿ–ವಾಟ್ವಾ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು (07333) ಜೂನ್ 15ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಈಗ ಜೂನ್ 22ರಿಂದ ಜುಲೈ 13ರ ವರೆಗೆ ಮುಂದುವರಿಯಲಿದೆ.
ವಾಟ್ವಾ–ಎಸ್ಎಸ್ಎಸ್ ಹುಬ್ಬಳ್ಳಿ ರೈಲನ್ನು (07334) ಜೂನ್ 16 ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಈಗ ಜೂನ್ 23 ರಿಂದ ಜುಲೈ 14 ರವರೆಗೆ ಮುಂದುವರಿಯಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ–ಬನಾರಸ್ ರೈಲು (07323) ಸಂಚಾರವು ಜೂನ್ 28ಕ್ಕೆ ಕೊನೆಯಾಗುವ ಬದಲು ಜುಲೈ 5ರಿಂದ ಜುಲೈ 26ರವರೆಗೆ ಸಂಚರಿಸಲಿದೆ. ಬನಾರಸ್–ಎಸ್ಎಸ್ಎಸ್ ಹುಬ್ಬಳ್ಳಿ ರೈಲು (07324) ಈ ಹಿಂದಿನ ಸೂಚನೆಯಂತೆ ಜುಲೈ 1ರವರೆಗೆ ಮಾತ್ರ ಸಂಚರಿಸಬೇಕಿತ್ತು. ಈಗ ಜುಲೈ 8ರಿಂದ ಜುಲೈ 29 ರವರೆಗೆ ಸಂಚರಿಸಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ–ಮುಜಾಫರ್‌ಪುರ ವಿಶೇಷ ರೈಲು (07315) ಸಂಚಾರ ಜೂನ್ 23ಕ್ಕೆ ಕೊನೆಯಾಗುವ ಬದಲು ಜೂನ್ 30ರಿಂದ ಆಗಸ್ಟ್ 25ರವರೆಗೆ ಮುಂದುವರಿಯಲಿದೆ.
ಮುಜಾಫರ್‌ಪುರ–ಎಸ್ಎಸ್ಎಸ್ ಹುಬ್ಬಳ್ಳಿ ರೈಲನ್ನು (07316) ಜೂನ್ 26 ರವರೆಗೆ ಓಡಿಸಲು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜುಲೈ 3ರಿಂದ ಆಗಸ್ಟ್ 28 ರವರೆಗೆ ವಿಸ್ತರಿಸಲಾಗಿದೆ.
ಬೆಳಗಾವಿ–ಮೌ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (07327) ಸಂಚಾರ ಜುಲೈ 06 ರಿಂದ ಆಗಸ್ಟ್ 31ರವರೆಗೆ ಮುಂದುವರಿಯಲಿದೆ. ಮೌ–ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು (07328) ಜುಲೈ 2 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು. ಈಗ ಜುಲೈ 09 ರಿಂದ ಸೆಪ್ಟೆಂಬರ್ 3 ರವರೆಗೆ ಸಂಚಾರ ಮುಂದುವರಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.