ADVERTISEMENT

ಹೈದರಾಬಾದ್–ವಿಜಯಪುರ ನಿತ್ಯ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಪುನರಾರಂಭ

ಗುಮ್ಮಟನಗರಿಗೆ 15ರಿಂದ ರಾಯಚೂರಿನಿಂದ ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 12 ಮೇ 2022, 12:39 IST
Last Updated 12 ಮೇ 2022, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ: ಇದೇ 14ರಿಂದ ಹೈದರಾಬಾದ್–ವಿಜಯಪುರ ನಡುವೆ ನಿತ್ಯ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಪುನರಾರಂಭಿಸಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲು ವಿಜಯಪುರದಿಂದ 16ರಿಂದ ಕಾರ್ಯಾಚರಣೆ ನಡೆಸಲಿದೆ.

14ರಿಂದ ಹೈದರಾಬಾದ್‌ನಿಂದ ರಾತ್ರಿ 9.10ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.05ಕ್ಕೆ ವಿಜಯಪುರ ತಲುಪಲಿದೆ. 16ರಿಂದ ಸಂಜೆ 6.30ಕ್ಕೆ ವಿಜಯಪುರದಿಂದ ಹೊರಟು ಮರುದಿನ ಬೆಳಿಗ್ಗೆ 8.10ಕ್ಕೆ ಹೈದರಾಬಾದ್‌ ಮುಟ್ಟಲಿದೆ.

ಖೈರತಾಬಾದ್, ಬೇಗಂಪೇಟೆ, ಸನತ್‌ ನಗರ, ಹಫೀಜ್ ಪೇಟ್, ಲಿಂಗಂಪಲ್ಲಿ, ಶಂಕರಪಲ್ಲಿ, ರಾಹುಲ್‌ಪಲ್ಲಿ ಕಲಾನ್‌, ಚಿಟ್ಟಗಿಡ್ಡ, ವಿಕರಾಬಾದ್‌, ರುಕ್ಮಾಪುರ, ತಾಂಡೂರ, ಸೇಡಂ, ಮಳಖೇಡ ರೋಡ್‌, ಚಿತ್ತಾಪುರ, ವಾಡಿ, ಹಿರೇನಂದೂರ, ಕಲಬುರಗಿ, ಬಬಲಾದ, ಸಾವಳಗಿ,ಗಾಣಗಾಪುರ ರೋಡ್, ಗೌಡಗಾಂವ, ಧುದನಿ, ಅಕ್ಕಲಕೋಟ ರೋಡ್, ಹೂಟಗಿ, ಸೊಲ್ಲಾಪುರ, ಸೊಲ್ಲಾಪುರ, ಸುಲೇರಜವಳಗಿ, ತಡವಾಳ, ಪಡನೂರ, ಲಚ್ಯಾಣ, ಇಂಡಿ ರೋಡ್, ಚೋರಗಿ, ನಿಂಬಾಳ, ಕ್ಯಾತನಕೇರಿ ರೋಡ್, ಮಿಂಚನಾಳ ಹಾಗೂ ವಿಜಯಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ADVERTISEMENT

ವಿಜಯಪುರ–ರಾಯಚೂರು ರೈಲು: ಇದೇ 15ರಿಂದ ವಿಜಯಪುರ–ರಾಯಚೂರು ನಡುವೆ ನಿತ್ಯ ವಿಶೇಷ ಪ್ಯಾಸೆಂಜರ್‌ ರೈಲಿನ ಸಂಚಾರ ಪುನರರಾಂಭವಾಗಲಿದೆ.

15ರಂದು ಮಧ್ಯಾಹ್ನ 12.10ಕ್ಕೆ ವಿಜಯಪುರದಿಂದ ಹೊರಡುವ ರೈಲು ಅಂದು ರಾತ್ರಿ 9.15ಕ್ಕೆ ರಾಯಚೂರು ಮುಟ್ಟಲಿದೆ. 16ರಂದು ಬೆಳಿಗ್ಗೆ 7.45ಕ್ಕೆ ರಾಯಚೂರಿನಿಂದ ಹೊರಟು ಅಂದು ಸಂಜೆ 5.20ಕ್ಕೆ ಗುಮ್ಮಟನಗರಿ ತಲುಪಲಿದೆ.

ಚಿಕ್ಕಸಗೂರು, ಕೃಷ್ಣಾ, ಚೆಗುಂಟಾ, ಸೈದಾಪುರ, ಯಾದಗಿರಿ, ಠಾಣಗುಂಡಿ, ನಾಲವಾರ, ವಾಡಿ, ಶಹಬಾದ್‌, ಮರತೂರ, ಹಿರೇನಂದೂರ, ಕಲಬುರಗಿ, ಬಬಲಾದ, ಸಾವಳಗಿ,ಹುಣಸಿಹಡಗಿಲ, ಗಾಣಗಾಪುರ ರೋಡ್, ಗೌಡಗಾಂವ, ಕುಲಾಲಿ, ಧುದನಿ, ಬೊರೊಟಿ, ನಾಗಣಸೂರ್, ಅಕ್ಕಲಕೋಟ ರೋಡ್, ತಿಲಾಟಿ, ಹೂಟಗಿ, ಟಿಕೆಕರವಾಡಿ, ಸೊಲ್ಲಾಪುರ, ಸುಲೇರಜವಳಗಿ, ತಡವಾಳ, ಪಡನೂರ, ಲಚ್ಯಾಣ, ಇಂಡಿ ರೋಡ್, ಚೋರಗಿ, ನಿಂಬಾಳ, ಕ್ಯಾತನಕೇರಿ ರೋಡ್, ಮಿಂಚನಾಳ ಹಾಗೂ ವಿಜಯಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.