ADVERTISEMENT

ಲೇಖಕ, ಗಾಯಕರಿಗೆ ಭಾವಪೂರ್ಣ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 16:47 IST
Last Updated 12 ಜನವರಿ 2022, 16:47 IST
ಹುಬ್ಬಳ್ಳಿಯಲ್ಲಿ ಜೀವಿ ಕಲಾಬಳಗದ ವತಿಯಿಂದ ಪ್ರೊ. ಚಂದ್ರಶೇಖರ ಪಾಟೀಲ ಹಾಗೂ ಬಸವಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಹುಬ್ಬಳ್ಳಿಯಲ್ಲಿ ಜೀವಿ ಕಲಾಬಳಗದ ವತಿಯಿಂದ ಪ್ರೊ. ಚಂದ್ರಶೇಖರ ಪಾಟೀಲ ಹಾಗೂ ಬಸವಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಹುಬ್ಬಳ್ಳಿ: ಸಾಹಿತ್ಯದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ನೇರ ಹಾಗೂ ನಿಷ್ಠುರ ಮಾತುಗಾರ ಪ್ರೊ. ಚಂದ್ರಶೇಖರ ಪಾಟೀಲ ಅವರ ಅಗಲಿಕೆಯಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಜಾನಪದ ಸಂಗೀತದ ಕಂಚಿನ ಕಂಠದ ಹಾಡುಗಾರ ಬಸವಲಿಂಗಯ್ಯ ಹಿರೇಮಠ ಅವರ ಸೇವೆಯೂ ಅನುಪಮವಾದದ್ದು ಎಂದು ಜೀವಿ ಕಲಾಬಳಗದ ಅಧ್ಯಕ್ಷ ಗದಿಗೆಯ್ಯಾ ಹಿರೇಮಠ ಹೇಳಿದರು.

ಇಲ್ಲಿನ ವಿದ್ಯಾನಗರದ ವೀರಸೋಮೇಶ್ವರ ನಿಲಯದ ‘ಸಂಸ್ಕೃತಿ ಅಟ್ಟ’ದಲ್ಲಿ ಜೀವಿ ಕಲಾಬಳಗ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪದ ಗಾಯಕ ಡಾ. ರಾಮು ಮೂಲಗಿ ಮಾತನಾಡಿ ‘ಚಂಪಾ ಅವರ ಸಾಹಿತ್ಯಕ್ಕೆ, ಬಸವಲಿಂಗಯ್ಯ ಅವರು ಜಾನಪದ ಮತ್ತು ತತ್ವಪದ ಗೀತೆಗಳ ಲೋಕಕ್ಕೆ ನೀಡಿದ ಕೊಡುಗೆ ಅಪಾರ’ ಎಂದರು.

ADVERTISEMENT

ಗುರು ಕಲಾ ನಾಟ್ಯ ಸಂಘದ ಮುಖ್ಯಸ್ಥ ಪ್ರಕಾಶ ದೂಳೆ, ಜೈಂಟ್ಸ್ ಗ್ರೂಪ್‌ನ ವಿ.ಜಿ. ಪಾಟೀಲ, ರಂಭಾಪುರಿ ಸಾಂಸ್ಕೃತಿಕ ಸಂಘದ ಡಾ.ಎಸ್.ವಿ. ಹಿರೇಮಠ, ಕನ್ನಡ ಕಲಾ ಕೃಷಿ ಬಳಗದ ಎಸ್.ಕೆ. ಮಾಲಿಪಾಟೀಲ, ಸಿ.ಎಸ್‌. ಪಾಟೀಲ ಕುಲಕರ್ಣಿ, ಮಂಜುನಾಥಗೌಡ ಪಾಟೀಲ, ಪ್ರಕಾಶ ನೂಲ್ವಿ, ಮಾರುತಿ ಜಾಧವ, ಶಿವಯೋಗೆಪ್ಪ ಎಮ್ಮಿ, ರಾಮನಗೌಡರ, ಪ್ರವೀಣ ಬೆಳಗಲಿ, ರಾಧಿಕಾ ಶಿಗ್ಗಾವಿ, ರೇಣುಕಾ ಲಿಂಗರೆಡ್ಡಿ, ದಾನೇಶ ಚೌಕಿಮಠ, ಬಸವರಾಜ ಸಂಭೋಜಿ, ಮಲ್ಲು ಚೌಕಿಮಠ, ಉದಯ, ಗುರುಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.