ADVERTISEMENT

ಮಾರುಕಟ್ಟೆಗೆ ಹೊಸ ಉತ್ಪನ್ನ ಪರಿಚಯಿಸಿ

ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ ಕಾಂಬಳೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 15:40 IST
Last Updated 12 ಮಾರ್ಚ್ 2022, 15:40 IST
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ಶನಿವಾರ ದೇಶಪಾಂಡೆ ಫೌಂಡೇಷನ್‌ ಆಯೋಜಿಸಿದ್ದ ಉದ್ಯಮಿ ಮೆಗಾ ಉತ್ಸವವನ್ನು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ(ಡಿಡಿಎಂ) ಮಯೂರ ಕಾಂಬಳೆ ಉದ್ಘಾಟಿಸಿದರು
ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ಶನಿವಾರ ದೇಶಪಾಂಡೆ ಫೌಂಡೇಷನ್‌ ಆಯೋಜಿಸಿದ್ದ ಉದ್ಯಮಿ ಮೆಗಾ ಉತ್ಸವವನ್ನು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ(ಡಿಡಿಎಂ) ಮಯೂರ ಕಾಂಬಳೆ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಭಿನ್ನವಾದ ವಸ್ತುಗಳನ್ನು ಪರಿಚಯಿಸಬೇಕಿದೆ’ ಎಂದು ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ (ಡಿಡಿಎಂ) ಮಯೂರ ಕಾಂಬಳೆ ಹೇಳಿದರು.

ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾ ಭವನದಲ್ಲಿ ದೇಶಪಾಂಡೆ ಫೌಂಡೇಷನ್‌ ವತಿಯಿಂದ ಆಯೋಜಿಸಿದ್ದ ಉದ್ಯಮಿ ಮೆಗಾ ಉತ್ಸವ ಹಾಗೂ ಸ್ವಾವಲಂಬಿ ಸಖಿ ಉತ್ಪಾದಕರ ಕಂಪನಿ (ಎಸ್‌ಎಸ್‌ಪಿಸಿಎಲ್)ಯ ಎರಡನೇ ವರ್ಷದ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ಉತ್ಪನ್ನಗಳನ್ನು ಪರಿಚಯಿಸುವುದರ ಜತೆಗೆ ಉತ್ತಮ ಮಾರುಕಟ್ಟೆಯನ್ನು ರೂಪಿಸುವ ಅವಶ್ಯವಿದೆ. ಮಾರುಕಟ್ಟೆಯಲ್ಲಿ ಇರುವುದಕ್ಕಿಂತ ಭಿನ್ನವಾದ ಉತ್ಪನ್ನಗಳನ್ನು ನೀಡಿದರೆ, ಗ್ರಾಹಕರು ಖರೀದಿಸುತ್ತಾರೆ. ಜನರ ಬೇಡಿಕೆಗೆ ಅನುಗುಣವಾಗಿ ವಸ್ತುಗಳನ್ನು ಪರಿಚಯಿಸುವುದು ಮುಖ್ಯವಾಗಿದೆ’ ಎಂದರು.

ADVERTISEMENT

ದೇಶಪಾಂಡೆ ಫೌಂಡೇಷನ್‌ ಸಿಇಒಕಚೇರಿಯ ಕಾರ್ಯನಿರ್ವಾಹಕ ಸಂದೀಪ ಸಬರವಾಲ ಮಾತನಾಡಿದರು. ದೇಶಪಾಂಡೆ ಫೌಂಡೇಷನ್‌‌ನ ಸಣ್ಣ ಉದ್ದಿಮೆದಾರರ ಅಭಿವೃದ್ಧಿ ಕಾರ್ಯಕ್ರಮದ ಸಹಾಯಕ ವ್ಯವಸ್ಥಾಪಕಿ ರಾಜೇಶ್ವರಿ ಲದ್ದಿ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು.

ಉದ್ಯಮಿ ಮೆಗಾ ಉತ್ಸವದಲ್ಲಿ ಮಣ್ಣಿನ ಕರಕುಶಲ ವಸ್ತುಗಳು, ಆಲಂಕಾರಿಕ ವಸ್ತುಗಳು ಸೇರಿದಂತೆ ಹಲವು ಗೃಹಪಯೋಗಿ ವಸ್ತುಗಳು ಪ್ರದರ್ಶನ ಮತ್ತು ಮಾರಾಟ ಮಾ.15ರವರೆಗೆ ನಡೆಯಲಿದೆ.

ಪ್ರವೀಣಕುಮಾರ ನಿಶಾನಿಮಠ, ಈರಣ್ಣ ರೊಟ್ಟಿ, ಪುಷ್ಪಾಂಜಲಿ, ಸುನಿತಾ ಪಾಟೀಲ, ಸಂಜನಾ ಪಾಯದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.