ADVERTISEMENT

ಇಸ್ರೊ ಸ್ಪರ್ಧೆ | ಐಐಐಟಿಗೆ ತೃತೀಯ ಸ್ಥಾನ: ₹5 ಲಕ್ಷ ನಗದು ಬಹುಮಾನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
‘ಇಸ್ರೊ ರೊಬೊಟಿಕ್ಸ್‌ ಚಾಲೆಂಜ್‌’ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಧಾರವಾಡದ ಐಐಐಟಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ಮಲ್ಲಿಕಾರ್ಜುನ ಕಂಡೆ ಅವರ ತಂಡ
‘ಇಸ್ರೊ ರೊಬೊಟಿಕ್ಸ್‌ ಚಾಲೆಂಜ್‌’ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಧಾರವಾಡದ ಐಐಐಟಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ಮಲ್ಲಿಕಾರ್ಜುನ ಕಂಡೆ ಅವರ ತಂಡ   

ಧಾರವಾಡ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯು.ಆರ್‌. ರಾವ್‌ ಉಪಗ್ರಹ ಕೇಂದ್ರವು ನಡೆಸಿದ ‘ಇಸ್ರೊ ರೊಬೊಟಿಕ್ಸ್‌ ಚಾಲೆಂಜ್‌’ ಸ್ಪರ್ಧೆಯಲ್ಲಿಇಲ್ಲಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ತಂಡ 3ನೇ ಬಹುಮಾನ ಪಡೆದಿದೆ.

‘ಫ್ಲೈ ಮಿ ಆನ್ ಮಾರ್ಸ್‌’ ವಿಷಯ ಕುರಿತ ಸ್ಪರ್ಧೆಯಲ್ಲಿ ವಿವಿಧ ಐಐಟಿ, ಎನ್‌ಐಟಿ, ಎಂಜಿನಿಯರಿಂಗ್‌ ವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯಗಳ 510ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ತೃತೀಯ ಸ್ಥಾನ ಗಳಿಸಿದ ಸಂಸ್ಥೆಯ ತಂಡವು ₹ 5 ಲಕ್ಷ ಬಹುಮಾನ ಪಡೆದಿದೆ’ ಎಂದು ಐಐಐಟಿ ನಿರ್ದೇಶಕ ಎಸ್.ಆರ್.ಮಹದೇವ ಪ್ರಸನ್ನ ತಿಳಿಸಿದರು.

‘ಮಂಗಳಯಾನಕ್ಕೆ ಇಸ್ರೊ ಉದ್ದೇಶಿಸಿದೆ. ಮಂಗಳ ಗ್ರಹದಲ್ಲಿ ಗುರುತ್ವಾಕರ್ಷಣೆ ಮತ್ತು ಜಿಪಿಎಸ್‌ ಸೌಲಭ್ಯ ಇಲ್ಲ. ಆ ಗ್ರಹದಲ್ಲಿ ಡ್ರೋನ್‌ ಹಾರಾಟ ಮತ್ತು ಕೆಳಗಿಳಿಯುವ ವಿಷಯ ಆಧರಿಸಿ ತಂಡವು ಡ್ರೋನ್‌ ವಿನ್ಯಾಸಗೊಳಿಸಿತ್ತು’ ಎಂದು ತಿಳಿಸಿದರು.

ADVERTISEMENT

‘ಸೌರವ್ ಸುರೇಶ್ ಕರ್ಕಿ ನೇತೃತ್ವದ ತಂಡದಲ್ಲಿ ಅಮಿತ್‌ ಮ್ಯಾಥ್ಯೂ, ರಂಜಿತ್‌ ಬಾಬು, ಕೃಷ್ಣ ಸಾಯಿ ಗೊಲ್ಲಮುಡಿ, ಅರ್ನವ್‌ ಅಮಿತ್‌ ಅಂಗರ್ಕರ್‌, ಪುರೋಹಿತ್‌ ಗೌರವ್‌ ಘನಶ್ಯಾಮ್‌ ಮತ್ತು ಲೋಹಿತ್‌ ಬಿ. ಇದ್ದರು.  ಪ್ರಾಧ್ಯಾಪಕ ಮಲ್ಲಿಕಾರ್ಜುನ ಕಂಡೆ ಮಾರ್ಗದರ್ಶನ ನೀಡಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.