ADVERTISEMENT

ಅಭಿವೃದ್ಧಿಗೆ ಐಟಿ ಕ್ಷೇತ್ರದ ಕೊಡುಗೆ ಅಪಾರ: ಇ–ಕಾಮರ್ಸ್ ತಜ್ಞೆ ದೀಪಾಲಿ ಗೋಟಡ್ಕೆ

ಇ–ಕಾಮರ್ಸ್ ತಜ್ಞೆ ದೀಪಾಲಿ ಗೋಟಡ್ಕೆ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 15:18 IST
Last Updated 20 ಜುಲೈ 2022, 15:18 IST
ಹುಬ್ಬಳ್ಳಿಯ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಗ್ಲೋಬಲ್ ಕಾಲೇಜು ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದಿಂದ ಏರ್ಪಡಿಸಿದ್ದ ‘ತಂತ್ರಾಸ್ತ್ರ ಭಾಗ-2’ ಮಾಹಿತಿ ತಂತ್ರಜ್ಞಾನ ಉತ್ಸವದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಸಿ.ಜಾಬಿನ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳು ಟ್ರೋಫಿಯೊಂದಿಗೆ ಸಂಭ್ರಮಿಸಿದರು
ಹುಬ್ಬಳ್ಳಿಯ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಗ್ಲೋಬಲ್ ಕಾಲೇಜು ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದಿಂದ ಏರ್ಪಡಿಸಿದ್ದ ‘ತಂತ್ರಾಸ್ತ್ರ ಭಾಗ-2’ ಮಾಹಿತಿ ತಂತ್ರಜ್ಞಾನ ಉತ್ಸವದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಸಿ.ಜಾಬಿನ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳು ಟ್ರೋಫಿಯೊಂದಿಗೆ ಸಂಭ್ರಮಿಸಿದರು   

ಹುಬ್ಬಳ್ಳಿ: ದೇಶದ ಅಭಿವೃದ್ಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆ ಅಪಾರ ಎಂದು ಇ– ಕಾಮರ್ಸ್ ಹಾಗೂ ವೆಬ್‌ ಡೆವಲಪ್‌ಮೆಂಟ್‌ ತಜ್ಞೆ ದೀಪಾಲಿ ಗೋಟಡ್ಕೆ ಅಭಿಪ್ರಾಯಪಟ್ಟರು.

ನಗರದ ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಗ್ಲೋಬಲ್ ಕಾಲೇಜು ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದಿಂದ ನಡೆದ ‘ತಂತ್ರಾಸ್ತ್ರ ಭಾಗ-2’ ಮಾಹಿತಿ ತಂತ್ರಜ್ಞಾನ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಫ್ಟ್‌ವೇರ್ ತಜ್ಞ ಪ್ರಸನ್ನ ಕುಲಕರ್ಣಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆಯಬೇಕು ಎಂದು ತಿಳಿಸಿದರು.

ADVERTISEMENT

ಉತ್ಸವದಲ್ಲಿ ವಿವಿಧ ಕಾಲೇಜುಗಳ 14 ತಂಡಗಳು ಭಾಗವಹಿಸಿದ್ದವು. ಕೆಎಲ್‍ಇ ಸಂಸ್ಥೆಯ ಪಿ.ಸಿ.ಜಾಬಿನ ಬಿಸಿಎ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು. ವಿಜೇತ ತಂಡಕ್ಕೆ ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಯಿತು.

ಪ್ರತಿಷ್ಠಾನದ ಕಾರ್ಯದರ್ಶಿ ಪುಷ್ಪಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಡೀನ್ ಡಾ.ಮಹೇಶ ದೇಶಪಾಂಡೆ, ಬಿಸಿಎ ಕಾಲೇಜಿನ ಪ್ರಾಚಾರ್ಯೆ ಪ್ರೊ.ಅಶ್ವಿನ ಕೋಟಿ, ಪ್ರೊ.ಶ್ವೇತಾ ಕೆ., ಉತ್ಸವದ ಸಂಯೋಜಕ ಪ್ರೊ.ಪೂಜಾ, ಪ್ರೊ.ಮಿಥುನ, ಪ್ರೊ.ಶಿಲ್ಪಾ, ಪ್ರೊ.ಶ್ರುತಿ, ಸುನೀಲ ನಾಯ್ಕ ಇದ್ದರು.

ಪ್ರೊ.ಶ್ವೇತಾ ಕೋಣನವರ ಸ್ವಾಗತಿಸಿದರು. ಪ್ರೊ.ಪೂಜಾ ಕರಜಗಿ ಉತ್ಸವದ ವರದಿ ಪ್ರಸ್ತುತಪಡಿಸಿದರು. ಪ್ರೊ.ಶ್ರುತಿ ಸುಣಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.