
ಪ್ರಜಾವಾಣಿ ವಾರ್ತೆ
ಧಾರವಾಡದ ಲೈನ್ ಬಜಾರ್‌ನ ಶೀತಲನಾಥ ಮಂದಿರದಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು
ಧಾರವಾಡ: ಇಲ್ಲಿನ ಲೈನ್‌ಬಜಾರ್‌ನ ಶೀತಲನಾಥ ಮಂದಿರದ ಹುಂಡಿ ಒಡೆದು, ಹಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಮಂದಿರದ ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಗೆಡವಿ ನಂತರ ಕಳವು ಮಾಡಿದ್ದಾರೆ. ಹುಂಡಿಯಿಂದ ನೋಟುಗಳನ್ನು ಕದ್ದೊಯಿದ್ದಾರೆ. ನಾಣ್ಯಗಳು ಹುಂಡಿಯಲ್ಲಿವೆ.
ಮಂದಿರದಲ್ಲಿದ್ದ ಬೆಳ್ಳಿ ವಸ್ತುಗಳನ್ನು (ದೀಪ, ತಟ್ಟೆ, ಆರತಿ ಬಟ್ಟಲು...) ತೆಗೆದುಕೊಂಡು ಹೋಗಿಲ್ಲ.
‘ರಾತ್ರಿ ಸುಮಾರು 2 ಗಂಟೆ ಹೊತ್ತಿನಲ್ಲಿ ಮಂದಿರಕ್ಕೆ ನುಗ್ಗಿ ಕೃತ್ಯ ಎಸಗಿದ್ದಾರೆ. ಅಂದಾಜು ₹1.5 ಲಕ್ಷ ಹಣ ಕದ್ದೊಯ್ದಿರಬಹುದು ಎಂದು ಮಂದಿರದವರು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.