ADVERTISEMENT

‘ಬರ ಪರಿಹಾರ ನೀಡದೇ ಕಾಂಗ್ರೆಸ್ ದಿವಾಳಿ’

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 16:15 IST
Last Updated 27 ಏಪ್ರಿಲ್ 2024, 16:15 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತು ಹೇಳಿಲ್ಲ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆಡಳಿತ ಸಹಿಸದ ಕಾಂಗ್ರೆಸ್‌ನವರು ರಾಜಕೀಯ ದುರುದ್ದೇಶದಿಂದ ‘ಇಂಡಿಯಾ’ ಒಕ್ಕೂಟದ ಜೊತೆ ಸೇರಿ ನ್ಯಾಯಾಲಯಕ್ಕೆ ಹೋಗಿದ್ದಾರೆ’ ಎಂದು ಕೇಂದ್ರ ಸಚಿವ, ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಶನಿವಾರ ಆರೋಪಿಸಿದರು.

‘ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ರಾಜ್ಯ ವಿಪತ್ತು ಸ್ಪಂದನಾ ನಿಧಿಯಲ್ಲಿ ಪರಿವರ್ತನೆ ಮಾಡಿ, ಮುಂಚಿತವಾಗಿ ಹಣ ನೀಡುತ್ತಿದೆ’ ಎಂದು ಸುದ್ದಿಗಾರರ ಜೊತೆಗೆ ಮಾತನಾಡಿ ಸಮರ್ಥಿಸಿಕೊಂಡರು.

‘ಪ್ರಸ್ತುತ ವರ್ಷ ರೈತರಿಗೆ ಬರ ಪರಿಹಾರವಾಗಿ ರಾಜ್ಯ ಸರ್ಕಾರ ₹900 ಕೋಟಿ ವಿತರಿಸಬೇಕಿತ್ತು. ಆದರೆ, ರೈತರ ಖಾತೆಗೆ ಕೇವಲ ₹2 ಸಾವಿರ ಜಮಾ ಮಾಡಿದೆ’ ಎಂದು ಅವರು ಆರೋಪಿಸಿದರು.

ADVERTISEMENT

‘ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವಿದ್ದಾಗ ಬರ ಪರಿಹಾರ ನೀಡಲಾಗಿತ್ತು. ಈಗ ಏಕೆ ನೀಡಿಲ್ಲ? ಕಾಂಗ್ರೆಸ್ ದಿವಾಳಿ ಆಗಿರುವುದಕ್ಕೆ ಇದೇ  ಸಾಕ್ಷಿ ಎಂದು ಜನ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.