ADVERTISEMENT

ರಾಜ್ಯಮಟ್ಟದ ಪ್ಯಾರಾ ಶೂಟಿಂಗ್ ಚಾಂಪಿಯನ್‌ಷಿಪ್: ಜ್ಯೋತಿ, ನಾಗೇಂದ್ರ ಚಿನ್ನದ ಸಾಧನೆ

ರಾಜ್ಯಮಟ್ಟದ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 17:22 IST
Last Updated 12 ಸೆಪ್ಟೆಂಬರ್ 2021, 17:22 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್‌ ಟೂರ್ನಿಯಲ್ಲಿ ಪದಕ ಗೆದ್ದವರು ಹಾಗೂ ಅತಿಥಿ. ನಿಂತವರು; ಎಡದಿಂದ: ನಾಗೇಶ ಜಿ.ಕೆ., ಕಮಲಾಕ್ಷ್ಮಿ ಎಸ್‌.ಡಿ., ಸಂತೋಷ ಭಾಂಡಗೆ, ಎಲ್‌. ನಂಜುಂಡರಾವ್‌, ನಾಗೇಂದ್ರ ಎಂ.ಎಸ್‌., ಕೇಶವ ತೆಲಗು, ಮಹಮ್ಮದ್‌ ಇಮ್ರಾನ್‌, ಜ್ಯೋತಿ ಸಣ್ಣಕ್ಕಿ. ಕುಳಿತವರು; ಸುಧಾ ಎ., ಶಂಕರಲಿಂಗ ತವಳಿ, ಸ್ವರೂಪ್ ಉನಲಕರ್‌ (ಪ್ಯಾರಾಲಿಂಪಿಯನ್‌) ರಾಕೇಶ ನಿಡಗುಂದಿ ಹಾಗೂ ಸಂಗಮ್ಮ ಬಿ. ಆಲದಗಿಡದ –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್‌ ಟೂರ್ನಿಯಲ್ಲಿ ಪದಕ ಗೆದ್ದವರು ಹಾಗೂ ಅತಿಥಿ. ನಿಂತವರು; ಎಡದಿಂದ: ನಾಗೇಶ ಜಿ.ಕೆ., ಕಮಲಾಕ್ಷ್ಮಿ ಎಸ್‌.ಡಿ., ಸಂತೋಷ ಭಾಂಡಗೆ, ಎಲ್‌. ನಂಜುಂಡರಾವ್‌, ನಾಗೇಂದ್ರ ಎಂ.ಎಸ್‌., ಕೇಶವ ತೆಲಗು, ಮಹಮ್ಮದ್‌ ಇಮ್ರಾನ್‌, ಜ್ಯೋತಿ ಸಣ್ಣಕ್ಕಿ. ಕುಳಿತವರು; ಸುಧಾ ಎ., ಶಂಕರಲಿಂಗ ತವಳಿ, ಸ್ವರೂಪ್ ಉನಲಕರ್‌ (ಪ್ಯಾರಾಲಿಂಪಿಯನ್‌) ರಾಕೇಶ ನಿಡಗುಂದಿ ಹಾಗೂ ಸಂಗಮ್ಮ ಬಿ. ಆಲದಗಿಡದ –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಮೈಸೂರಿನ ನಾಗೇಂದ್ರ ಎಂ.ಎಸ್‌., ಮತ್ತು ಹುಬ್ಬಳ್ಳಿಯ ಜ್ಯೋತಿ ಸಣ್ಣಕ್ಕಿ ಅವರು ಭಾನುವಾರ ಕರ್ನಾಟಕ ಶೂಟಿಂಗ್‌ ಪ್ಯಾರಾ ಸ್ಪೋರ್ಟ್ಸ್‌ ಸಂಸ್ಥೆ ಆಯೋಜಿಸಿದ್ದ ರಾಜ್ಯಮಟ್ಟದ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದರು.

ಪ್ಯಾರಾ ಶೂಟಿಂಗ್‌ ಸಂಸ್ಥೆ ರಾಜ್ಯ ಅಂಗವಿಕಲರ ಸಂಸ್ಥೆಯ ಮಾನ್ಯತೆ ಪಡೆದ ಬಳಿಕ ನಡೆದ ಮೊದಲ ಟೂರ್ನಿ ಇದಾಗಿತ್ತು. 7 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, 25 ಪ್ಯಾರಾ ಶೂಟರ್‌ಗಳು ಪಾಲ್ಗೊಂಡಿದ್ದರು.

ಮಹಿಳೆಯರ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ ಎಸ್‌ಎಚ್‌ 1 ವಿಭಾಗದಲ್ಲಿ ಜ್ಯೋತಿ ಮಾತ್ರ ಭಾಗವಹಿಸಿದ್ದರಿಂದ ಅವರಿಗೆ ಚಿನ್ನದ ಪದಕ ಲಭಿಸಿತು. ಏರ್‌ ರೈಫಲ್‌ ಮಿಶ್ರ ಪ್ರೋನ್‌ ಎಸ್‌ಎಚ್‌ 1 ವಿಭಾಗದಲ್ಲಿ ಜ್ಯೋತಿ ಒಟ್ಟು 623.5 ಅಂಕಗಳನ್ನು ಗಳಿಸಿ ಎರಡನೇ ಚಿನ್ನ ಗೆದ್ದುಕೊಂಡರು. ಈ ವಿಭಾಗದ ಬೆಳ್ಳಿ ರಾಕೇಶ ನಿಡಗುಂದಿ (617.4 ಅಂಕ), ಕಂಚು ಶಂಕರಲಿಂಗ ತವಳಿ (610.5) ಪಾಲಾಯಿತು. ಈ ಮೂವರೂ ಪ್ಯಾರಾ ಶೂಟರ್‌ಗಳು ಇಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ADVERTISEMENT

ಫಲಿತಾಂಶ: ಪುರುಷರ ಏರ್‌ ಪಿಸ್ತೂಲ್‌ ಎಸ್‌ಎಚ್‌–1: ನಾಗೇಂದ್ರ ಎಂ.ಎಸ್‌. (ಮೈಸೂರು, 518 ಅಂಕ)–1, ವೇಣುಗೋಪಾಲ ಜಯಚಂದ್ರ (ಹುಬ್ಬಳ್ಳಿ, 505)–2, ಕೇಶವ ತೆಲಗು (ಹುಬ್ಬಳ್ಳಿ, 474).

ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ ಎಸ್‌ಎಚ್‌–1: ರಾಕೇಶ ನಿಡಗುಂದಿ (ಹುಬ್ಬಳ್ಳಿ, 556.2)–1, ಶಂಕರಲಿಂಗ ತವಳಿ (ಹುಬ್ಬಳ್ಳಿ, 514.2), ಮೊಹಮ್ಮದ್‌ ಇಮ್ರಾನ್‌ (ಹುಬ್ಬಳ್ಳಿ, 476.3)–3.

ಓಪನ್‌ ಸೈಟ್‌: ನಾಗೇಶ ಜಿ.ಕೆ., (ಹಾಸನ, 270)–1, ಸಂತೋಷ ಎನ್‌. ಭಾಂಡಗೆ (ಗದಗ,267)–2, ಎಲ್‌. ನಂಜುಂಡರಾವ್ (ಬೆಂಗಳೂರು, 238)–3.

ಮಹಿಳಾ ವಿಭಾಗದ ಓಪನ್‌ ಸೈಟ್‌: ಕಮಲಾಕ್ಷ್ಮಿ ಎಸ್‌.ಡಿ. (ಹಾಸನ, 211)–1, ಸಂಗಮ್ಮ ಬಿ. ಆಲದಗಿಡದ (ಹುಬ್ಬಳ್ಳಿ, 168), ಸುಧಾ ಎ., (ದಾವಣಗೆರೆ, 143)–3.

ಅಂಗವಿಕಲರ ಸಂಸ್ಥೆ ಮಾನ್ಯತೆ

ಹುಬ್ಬಳ್ಳಿ: ರಾಜ್ಯದಲ್ಲಿ ಪ್ಯಾರಾ ಶೂಟರ್‌ಗಳಿಗೆ ಉತ್ತೇಜನ ನೀಡಲು ಕರ್ನಾಟಕ ಶೂಟಿಂಗ್‌ ಪ್ಯಾರಾ ಸ್ಪೋರ್ಟ್ಸ್‌ ಸಂಸ್ಥೆ ಆರಂಭಿಸಲಾಗಿದೆ.

ಇದು ರಾಜ್ಯ ಅಂಗವಿಕಲರ ಸಂಸ್ಥೆಯ ಮಾನ್ಯತೆ ಹೊಂದಿದ್ದು, ಶೂಟಿಂಗ್‌ ಸಂಸ್ಥೆಯ ಉದ್ಘಾಟನೆ ಭಾನುವಾರ ಹುಬ್ಬಳ್ಳಿಯಲ್ಲಿ ನೆರವೇರಿತು.

ರಾಜ್ಯ ಅಂಗವಿಕಲರ ಸಂಸ್ಥೆ ಅಧ್ಯಕ್ಷ ಎಂ. ಮಹದೇವ, ಪ್ಯಾರಾ ಶೂಟಿಂಗ್‌ ಸಂಸ್ಥೆ ಅಧ್ಯಕ್ಷ ಹಾಗೂ ಒಲಿಂಪಿಯನ್‌ ಪಿ.ಎನ್‌. ಪ್ರಕಾಶ, ಕಾರ್ಯದರ್ಶಿ ರವಿಚಂದ್ರ ಬಾಲೆಹೊಸೂರ, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಸ್ವರೂಪ್‌ ಉನಲಕರ್ ಇದ್ದರು.

* ದೃಢ ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. ಮುಂದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ನಿಮ್ಮ ಮುಂದೆ ಬರುವೆ
-ಸ್ವರೂಪ್‌ ಉನಲಕರ್‌, ಪ್ಯಾರಾಲಿಂಪಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.