ಕಲಾದಗಿ: ದಕ್ಷಿಣ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಬಿರುಕು ಬಿಟ್ಟಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಮಳೆಗಾಲದಲ್ಲಿ ಪ್ರತಿವರ್ಷ ಘಟಪ್ರಭಾ ನದಿಯ ಹಿನ್ನೀರಿನಿಂದ ರಸ್ತೆ ಜಲಾವೃತವಾಗುತ್ತಿದ್ದರಿಂದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸೇತುವೆ ನಿರ್ಮಿಸಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಘಟಪ್ರಭಾ ನದಿಯಲ್ಲಿ ನೀರಿನ ಹರಿಯುವ ಮಟ್ಟ ಹೆಚ್ಚಾಗಿರುವುದರಿಂದ ಸೇತುವೆ ಹಾಗೂ ರಸ್ತೆ ಬಿರುಕು ಬಿಟ್ಟಿದ್ದು ಇನ್ನಷ್ಟು ಅಗಲವಾಗುವ ಆತಂಕ ಎದುರಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಎಇಇ ಶ್ರೀಕಾಂತ ಲಮಾಣಿ, ‘ಘಟಪ್ರಭಾ ನದಿಯ ಹಿನ್ನೀರು ಅಪಾರ ಪ್ರಮಾಣದಲ್ಲಿ ಆವರಿಸಿರುವುದರಿಂದ ಈ ರೀತಿ ಸಡಿಲಗೊಂಡು ಸ್ವಲ್ಪ ಮಟ್ಟಿಗೆ ಬಿರುಕು ಬಿಡುವುದು ಸಾಮಾನ್ಯ. ಸೇತುವೆಯ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುವುದರೊಳಗೆ ಸರಿಪಡಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.