ADVERTISEMENT

ಭ್ರಷ್ಟಾಚಾರ: ದೇಶದಲ್ಲಿ ಕಲಘಟಗಿಯೇ ಅಗ್ರ

‘ದಿಶಾ’ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:37 IST
Last Updated 2 ಅಕ್ಟೋಬರ್ 2022, 5:37 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಲ್ಜಾದ ಜೋಶಿ ಮಾತನಾಡಿದರು. ಲೋಕೇಶ ಬಿ. ಜಗಲಾಸರ್, ಅಮೃತ ದೇಸಾಯಿ, ಗುರುದತ್ತ ಹೆಗಡೆ, ಡಾ. ಸುರೇಶ ಇಟ್ನಾಳ, ಅರವಿಂದ ಬೆಲ್ಲದ, ಈರೇಶ ಅಂಚಟಗೇರಿ ಇದ್ದಾರೆ.
ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಲ್ಜಾದ ಜೋಶಿ ಮಾತನಾಡಿದರು. ಲೋಕೇಶ ಬಿ. ಜಗಲಾಸರ್, ಅಮೃತ ದೇಸಾಯಿ, ಗುರುದತ್ತ ಹೆಗಡೆ, ಡಾ. ಸುರೇಶ ಇಟ್ನಾಳ, ಅರವಿಂದ ಬೆಲ್ಲದ, ಈರೇಶ ಅಂಚಟಗೇರಿ ಇದ್ದಾರೆ.   

ಧಾರವಾಡ: ‘ಕಲಘಟಗಿ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಡೀ ದೇಶದಲ್ಲೇ ಕಲಘಟಗಿ ಕಂದಾಯ ಇಲಾಖೆಯಲ್ಲಿರುವಷ್ಟುಭ್ರಷ್ಟಾಚಾರ ಬೇರೆಲ್ಲೂ ಇಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ‘ದಿಶಾ’ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.

‌‘ಸರ್ಕಾರಗಳ ಯೋಜನೆಗಳಲ್ಲಿ ಕಳಪೆ ಗುಣಮಟ್ಟ ಹಾಗೂ ಭ್ರಷ್ಟಾಚಾರ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದರು.

ADVERTISEMENT

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯ ಪ್ರಗತಿ ಜಿಲ್ಲೆಯಲ್ಲಿ ತೃಪ್ತಿದಾಯಕವಾಗಿಲ್ಲ. 2 ವರ್ಷಗಳಿಂದ ಪ್ರಗತಿ ಕಂಡಿಲ್ಲ. ಜಲಶಕ್ತಿ, ಜಲಜೀವನ್ ಮಿಷನ್, ಮನೆಮನೆಗೆ ಗಂಗೆ ಯೋಜನೆಗಳ ಕಾಮಗಾರಿಗಳು ಮುಕ್ತಾಯವಾದ ಗ್ರಾಮಗಳಲ್ಲಿ ಅವುಗಳ ಪರಿಣಾಮ ಕುರಿತು ಏಜೆನ್ಸಿಗಳಿಂದ ಅಧ್ಯಯನ ಮಾಡಿಸಿ ವರದಿ ನೀಡಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒಗೆ ಸೂಚಿಸಿದರು.

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುರೇಶ ಇಟ್ನಾಳ, ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ. ಜಗಲಾಸರ್, ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.