ಹುಬ್ಬಳ್ಳಿ: ಶ್ರೀಲಂಕಾದಲ್ಲಿ ಜ.19 ಮತ್ತು 20ರಂದು ನಡೆಯಲಿರುವ ಅಂತರರಾಷ್ಟ್ರೀಯ ಕರಾಟೆ ಟೂರ್ನಿಯಲ್ಲಿ ಹುಬ್ಬಳ್ಳಿಯ ಆಸ್ಪೈರ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿಯ 18 ಪಟುಗಳು ಭಾಗವಹಿಸಲಿದ್ದಾರೆ ಎಂದು ತರಬೇತುದಾರ ಪುಲಕೇಶ ಮಲ್ಯಾಳ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, 9ರಿಂದ 50 ವರ್ಷದ ಪಟುಗಳು ಭಾಗವಹಿಸಲಿದ್ದಾರೆ ಎಂದರು.
ಅಭಿಲಾಷ್ ಮಲ್ಯಾಳ, ಆಕಾಶ್ ಮಲ್ಯಾಳ, ಅಸದ್ ಊಟವಾಲೆ, ಅಜೀಂ ಊಟವಾಲೆ, ದಾದಾಪೀರ್ ಊಟವಾಲೆ, ಹಸ್ತಿ ಜೈನ್, ಕಿರಣ ಯಲ್ಲಪ್ಪ ಹಂಜಗಿ, ಮಿಶಾ ಮೆಹತಾ, ಮುಸ್ತಾಕಅಹಮದ್ ಊಟವಾಲೆ, ಓಂಕಾರ ಪಂಚನ, ಪೂರ್ವಿ ಮಂಜುನಾಥ, ಪುಲಕೇಶ ಪರಶುರಾಮ ಮಲ್ಯಾಳ, ಸಹನಾ, ಸಾನಿಯಾ ಜೈನ್, ಶರಣಪ್ಪ ಬಮ್ಮಿಗಟ್ಟಿ, ಸೌಪರ್ಣಿಕಾ ಕಡಂಬಿ, ಸುಮುಖ ಗಿರೀಶ ಕಾಡಪ್ಪನವರ, ವಿಶಾಲ್ ಅರ್ಜುನ ಬಗಲೆ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಕಾಡೆಮಿಯ ಪಟುಗಳು ಈ ಹಿಂದೆ ಹೈದರಾಬಾದ್, ಪುಣೆ, ವಿಜಯಪುರ, ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಂತರರಾಷ್ಟ್ರೀಯ ಟೂರ್ನಿಗೆ ಕಳೆದ ಒಂದು ವರ್ಷದಿಂದ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಶರಣಪ್ಪ ಬಮ್ಮಿಗಟ್ಟಿ, ಮುಸ್ತಾಕ್ ಊಟವಾಲೆ, ಆಕಾಶ ಮಲ್ಯಾಳ, ಕಿರಣ ಹಂಜಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.