ನಿಂಗಪ್ಪ ಸಿಂಗೋಟಿ
ಧಾರವಾಡ: ‘ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಜುಲೈ 26ರಂದು ನಗರದಲ್ಲಿ ಕಾರ್ಗಿಲ್ ವಿಜಯೋತ್ಸವ ದಿವಸ ಆಚರಣೆ, ಆಪರೇಷನ್ ಸಿಂಧೂರ ಯಶಸ್ವಿ ಸಮಾರಂಭ ಮತ್ತು ತಿರಂಗಾ ಯಾತ್ರೆ ನಡೆಯಲಿದೆ’ ಎಂದು ಸಂಘದ ಉಪಾಧ್ಯಕ್ಷ ಪರಶುರಾಮಪ್ಪ ನವಲಗುಂದ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಿರಂಗಾ ಯಾತ್ರೆ ಬೆಳಿಗ್ಗೆ 8 ಗಂಟೆಗೆ ಗಾಂಧಿ ಚೌಕದಲ್ಲಿ ಆರಂಭವಾಗಿ ಪಾಲಿಕೆ ಕಚೇರಿಯ ಸುಭಾಷಚಂದ್ರ ಬೋಸ್ ಪುತ್ಥಳಿ, ಜುಬಿಲಿ ವೃತ್ತದ ಬಿ.ಆರ್. ಅಂಬೇಡ್ಕರ್, ಬಸವಣ್ಣ ಪುತ್ಥಳಿ, ಮುಖ್ಯ ಅಂಚೇರಿ ಕಚೇರಿ ವೃತ್ತದ ಉಳವಿ ಚನ್ನಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಗಿಲ್ ಸ್ತೂಪ ತಲುಪಿ ನಮನ ಸಲ್ಲಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಚನ್ನಬಸವೇಶ್ವರ ದೇಗುಲದ ಸಭಾಂಗಣದಲ್ಲಿ ಸತ್ಕಾರ ಸಮಾರಂಭ ನಡೆಯಲಿದೆ’ ಎಂದರು.
ಅಧ್ಯಕ್ಷ ನಿಂಗಪ್ಪ ಸಿಂಗೋಟಿ ಮಾತನಾಡಿ, ‘ತಾಲ್ಲೂಕು ಕೇಂದ್ರಗಳಲ್ಲಿ ಸೈನಿಕರ ಭವನ ನಿರ್ಮಿಸಬೇಕು. ಪ್ರತಿ ಜಿಲ್ಲೆಯಲ್ಲಿ ಯುದ್ಧ ಸ್ಮಾರಕ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.
ವೀರಪ್ಪ ಹೊಸಮನಿ, ಬಸಪ್ಪ ಕೊಪ್ಪದ, ಪ್ರಕಾಶ ಬಡಿಗೇರ, ಮಲ್ಲಪ್ಪ ನಾಯ್ಕರ್, ನಿರ್ಮಲಾ ನವಲಗುಂದ, ಸುನಂದಾ ಕೋರೆ, ನಿರ್ಮಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.