ADVERTISEMENT

ನಾಸೀರ್ ಹುಸೇನ್ ಕ್ಷಮೆ ಕೇಳುವವರೆಗೂ‌ ಪ್ರಮಾಣ ವಚನಕ್ಕೆ ಅವಕಾಶ ನೀಡಬಾರದು: ಜೋಶಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 9:16 IST
Last Updated 8 ಮಾರ್ಚ್ 2024, 9:16 IST
<div class="paragraphs"><p>ಪ್ರಲ್ಹಾದ ಜೋಶಿ</p></div>

ಪ್ರಲ್ಹಾದ ಜೋಶಿ

   

ಹುಬ್ಬಳ್ಳಿ: 'ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿ ಕಾಂಗ್ರೆಸ್'ಗೆ ಹತ್ತಿರದವನು. ನಾಸೀರ್ ಹುಸೇನ್ ಸಾರ್ವಜನಿಕವಾಗಿ‌ ಕ್ಷಮೆ‌ ಕೇಳುವವರೆಗೂ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದು' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಸೀರ್ ಹುಸೇನ್ ಅವರು ತಮ್ಮ ಬೆಂಬಲಿಗನನ್ನು ಒಳಗೆ ಕರೆದುಕೊಂಡು ಬಂದು, ಪಾಕಿಸ್ತಾನ ಪರ ಘೋಷಣೆ ಕೂಗುವಂತೆ ಮಾಡಿದ್ದಾರೆ. ಸೌಜನ್ಯಕ್ಕಾದರೂ ಅವರು ಕ್ಷಮೆ ಕೇಳಬೇಕಿತ್ತು. ಅದನ್ನು ಬಿಟ್ಟು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ' ಎಂದು ಕಿಡಿಕಾರಿದರು.

ADVERTISEMENT

'ರಾಹುಲ್ ಗಾಂಧಿ, ಸಿದ್ದರಾಮಯ್ಯ ಜೊತೆ ಪಾಕಿಸ್ತಾನ ಪರ ಘೋಷಣೆ ಕೂಗಿದ ವ್ಯಕ್ತಿಯ ಫೋಟೊಗಳು ಇವೆ. ಕಾಂಗ್ರೆಸ್ ನಿಕಟ ವ್ಯಕ್ತಿ ಎನ್ನಲು ಇನ್ನೇನು ಸಾಕ್ಷಿಬೇಕು. ದೇಶದ ಮೇಲಿನ ಋಣಕ್ಕಾದರೂ ಕ್ಷಮೆ ಕೇಳಲಿ. ಇಲ್ಲದಿದ್ದರೆ ಆ ವ್ಯಕ್ತಿಯ ಘೋಷಣೆಗೆ ನಾಸೀರ್ ಅವರ ಬೆಂಬಲವಿದೆ ಎಂದು ತಿಳಿಯಬೇಕಾಗುತ್ತದೆ' ಎಂದು ಹೇಳಿದರು.

'ಬೆಂಗಳೂರಿನ ಶ್ರೀರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಾಂಬಂಧಿಸಿ ರಾಜ್ಯ ಸರ್ಕಾರ ತನಿಖೆ ಮುಂದಿಸಿದೆ.‌ ಆದರೆ, ಅದು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ ಎಂದು ಸಂಶಯ ಮೂಡುತ್ತಿದೆ' ಎಂದರು.

'ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ನೀಡಿದ ಹಣವನ್ನು ಕೆಲವು ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಹಾಗೂ ಪ್ರಮಾಣಪತ್ರ ಸಹ ನೀಡಿಲ್ಲ. ಅನೇಕ ರಾಜ್ಯ ನೀಡಿದ ಲೆಕ್ಕಪರಿಶೋಧನೆ ವರದಿಯಲ್ಲಿ ಗೊಂದಲಗಳಿವೆ. ಗುತ್ತಿಗೆದಾರರಿಂದ ಕೆಲಸ ಮಾಡಿಸಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕೇಂದ್ರದಿಂದ ರಾಜ್ಯಕ್ಕೆ ಹಣ ಬಿಡುಗಡೆಗೆ ವಿಳಂಬವಾಗಿರಬಹುದು' ಎಂದು‌ ಸಚಿವ ಜೋಶಿ ಹೇಳಿದರು.

'ಅಡುಗೆ ಅನಿಲ ದರ ಇಳಿಕೆ, ಶಿವರಾತ್ರಿ ಕೊಡುಗೆ'

ಜಗತ್ತಿನಾದ್ಯಂತ ಆರ್ಥಿಕ ಸಂಕಷ್ಟ ಎದುರಾಗಿದೆ. ಇಂತಹ ವಿಷಮ‌ ಸ್ಥಿತಿಯಲ್ಲೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಗೃಹಬಳಕೆ ಅಡುಗೆ ಅನಿಲ ದರ ₹300 ಇಳಿಕೆ ಮಾಡಿದೆ. ಈ ಹಿಂದೆ ₹200 ಇಳಿಕೆ ಮಾಡಲಾಗಿತ್ತು. ದೇಶದ ಮಹಿಳೆಯರಿಗೆ ಶಿವರಾತ್ರಿ ದಿನದಂದು ನೀಡಿದ ಕೊಡುಗೆ ಇದಾಗಿದೆ' ಎಂದು ಸಚಿವ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.