ADVERTISEMENT

ಧಾರವಾಡ: ಜಿಲ್ಲೆಯ ವಿವಿಧೆಡೆ ಮಳೆ, ರೈತರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:42 IST
Last Updated 13 ಏಪ್ರಿಲ್ 2024, 16:42 IST
<div class="paragraphs"><p>ಧಾರವಾಡದಲ್ಲಿ ಮಳೆ </p></div>

ಧಾರವಾಡದಲ್ಲಿ ಮಳೆ

   

ಧಾರವಾಡ: ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಮಳೆ ಸುರಿಯಿತು.

ರಾತ್ರಿ 8 ಗಂಟೆ ವೇಳೆಗೆ ಶುರುವಾಗಿ ಸುಮಾರು ಒಂದು ತಾಸು ಸಾಧಾರಣವಾಗಿ ಸುರಿಯಿತು. ಕೆಎಂಎಫ್‌ ಬಳಿ, ಎನ್‌ಟಿಟಿಎಫ್‌ ಸಮೀಪ ರಸ್ತೆಯಲ್ಲಿ ನೀರು ನಿಂತಿತ್ತು.

ADVERTISEMENT

ಕೆಎಂಎಫ್‌ ಬಳಿ ರಸ್ತೆಯ ಬದಿಯ ಕಸ, ತ್ಯಾಜ್ಯ ಸರಿಸಿ ನೀರು ಚರಂಡಿಗೆ ಹರಿಯುವಂತೆ ಮಾಡಿದರು.

ನಗರದ ದೊಡ್ಡನಾಯಕನ ಕೊಪ್ಪ, ಪಿಬಿ ರಸ್ತೆ ಭಾಗ ಸಹಿತ ವಿವಿಧೆಡೆಗಳಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತವಾಗಿತ್ತು.

ಬಿಸಿಲಿನಿಂದ ಕಾದಿದ್ದ ಇಳೆಗೆ ಮಳೆ ತಂಪೆರೆಯಿತು. ಮಳೆ ಶುರುವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.

ಕುಂದಗೋಳ ತಾಲ್ಲೂಕಿನ ಶಿರೂರು, ಹಿರೇ ಹರಕುಣಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಕುಂದಗೋಳ ಪಟ್ಟಣ ಯರಗುಪ್ಪಿ ಗ್ರಾಮಗಳಲಿ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.