ADVERTISEMENT

ಬೆಳಗಾವಿ ಅಧಿವೇಶನದ ವಿಧೇಯಕಗಳು ಇನ್ನೂ ಬಂದಿಲ್ಲ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 7:02 IST
Last Updated 10 ಡಿಸೆಂಬರ್ 2021, 7:02 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ಬೆಳಗಾವಿ ಅಧಿವೇಶನದ ವಿಧೇಯಕಗಳು ಇನ್ನೂ ಬಂದಿಲ್ಲ. ಈ ಕುರಿತು ಮುಖ್ಯಮಂತ್ರಿ ‌ಹಾಗೂ ಸಂಬಂಧಿಸಿದವರಿಗೆ ಪತ್ರ ಬರೆದಿದ್ದೇನೆ ಎಂದು ವಿಧಾನ ಪರಿಷತ್ ಸಭಾಪತಿ‌ ಬಸವರಾಜ ಹೊರಟ್ಟಿ ತಿಳಿಸಿದರು.

ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಅಧಿವೇಶನ ಆರಂಭವಾಗುವ ಐದು ದಿನಗಳ ಮುಂಚೆಯೇ ವಿಧೇಯಕಗಳು. ಬರಬೇಕಿತ್ತು. ದುರ್ದೈವ ಯಾವುದೂ ಬಂದಿಲ್ಲ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಪ್ರಾಶಸ್ತ್ಯ ಕೊಡಲಾಗುತ್ತದೆ. ಅದಕ್ಕಾಗಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಮಸ್ಯೆಗಳನ್ನು ಎದುರಿಸುತ್ತಿರುವವರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೆ ಅವರೆಲ್ಲ ಸಮಸ್ಯೆಗಳಿಗೆ ಈ ಅಧಿವೇಶನ ಧ್ವನಿಯಾಗಲಿದೆ. ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ADVERTISEMENT

ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಬೇಕು. ಅವರು ಹಗಲುರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ. ಈ ಹಿಂದೆ 1300 ಅತಿಥಿ ಶಿಕ್ಷಕರನ್ನು ನಾವು ಕಾಯಂಗೊಳಿಸಿದ್ದೆವು. ಅದೇ ರೀತಿ ಈಗಿನ ಶಿಕ್ಷಣ ಸಚಿವರು ಉತ್ತಮ ಕ್ರಮ ತೆಗೆದುಕೊಂಡು ಅವರ ಸಮಸ್ಯೆ ಬಗೆಹರಿಸಬೇಕು. ಯಾವುದೇ ಅಧಿಕಾರಿಗಳ ಮಾತು ಕೇಳದೆ ಸ್ವತಃ ತೀರ್ಮಾನ ತೆಗೆದುಕೊಂಡು ಶಿಕ್ಷರ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಶಿಕ್ಷಕರ ವರ್ಗಾವಣೆಯಲ್ಲಿ 2007ರಲ್ಲಿ ಮಾಡಿರುವ ನಿಯಮ ಉತ್ತಮವಾಗಿದೆ. ಅದನ್ನು ಈ ಸರ್ಕಾರದವರು ಬಿಟ್ಟು ದೊಡ್ಡ ಸಮಸ್ಯೆ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳ ಕೈವಾಡ ಇದೆ. ಇದರಿಂದ ಯೋಗ್ಯವಾದವರು ವರ್ಗಾವಣೆಯಿಂದ ವಂಚಿತರಾಗುತ್ತಾರೆ. ಸ್ವತಃ ನಾನೆ ಬಹಳ ಸಲ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಅದಕ್ಕಾಗಿ 2007ರ ನಿಯಮ ಕಡ್ಡಾಯವಾಗಿ ಪಾಲನೆ ಮಾಡಿದರೆ ಎಲ್ಲರಿಗೂ ನ್ಯಾಯ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.