ADVERTISEMENT

ಕಸಾಪ; ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 12:42 IST
Last Updated 22 ಮಾರ್ಚ್ 2022, 12:42 IST
ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ಸೋಮವಾರ ತಾಲ್ಲೂಕು ಕ.ಸಾ.ಪ. ಪದಾಧಿಕಾರಿಗಳ ಪದಗ್ರಹಣದ ಉದ್ಘಾಟನೆ ನಡೆಯಿತು
ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರು ಗ್ರಾಮದಲ್ಲಿ ಸೋಮವಾರ ತಾಲ್ಲೂಕು ಕ.ಸಾ.ಪ. ಪದಾಧಿಕಾರಿಗಳ ಪದಗ್ರಹಣದ ಉದ್ಘಾಟನೆ ನಡೆಯಿತು   

ಹುಬ್ಬಳ್ಳಿ: ಕನ್ನಡ ಸಾಹಿತ್ಯ ಪರಿಷತ್‌ನ ಹುಬ್ಬಳ್ಳಿ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹೆಬಸೂರು ಗ್ರಾಮ ಪಂಚಾಯ್ತಿಯಲ್ಲಿ ಸೋಮವಾರ ನಡೆಯಿತು.

ಸಾಹಿತ್ಯ ಸಂಘಟಕ ಪ್ರೊ. ರಮಜಾನ್ ಕಿಲ್ಲೇದಾರ (ಅಧ್ಯಕ್ಷ), ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರ, ಕಾರ್ಮಿಕ ಮುಖಂಡ ಮಹೇಶ ಪತ್ತಾರ (ಕಾರ್ಯದರ್ಶಿಗಳು), ಶಿಕ್ಷಕ ನಂದಕುಮಾರ ಹೆಬಸೂರ (ಕೋಶಾಧ್ಯಕ್ಷ), ಸದಸ್ಯರಾಗಿ ರತ್ನಾ ಭಗವತಿ, ರಾಮಪ್ಪ ಚಲವಾದಿ, ಕರಿಯಪ್ಪ ಶಿರಹಟ್ಟಿ, ಫಕ್ಕೀರಪ್ಪ ತೋಟದ, ಸಚಿನ ಮಳಗಿ, ಸಿದ್ರಾಮಪ್ಪ ಶಿವಳ್ಳಿ, ಕೊಟ್ರೇಶ್ ಎಸ್.ಕೆ. ನಂದೀಶ ಹುಂಬಿ, ಎನ್.ಎಸ್ ಬಾದಾಮಿ. ಮಂಜುನಾಥ ಮಂಗೂಣಿ, ಚೆನ್ನವೀರ ಬೆಣ್ಣೆ ಅಧಿಕಾರ ಸ್ವೀಕರಿಸಿದರು.

ಪ್ರಮಾಣ ವಚನ ಬೋಧಿಸಿದ ಪರಿಷತ್‌ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ ‘ಪರಿಷತ್‌ನ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಸಲುವಾಗಿ ಹಳ್ಳಿಗಳಲ್ಲಿಯೂ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಈ ಮೂಲಕ ಕನ್ನಡ ಬೆಳೆಸುವ ಕಾರ್ಯ ನಡೆಸಲಾಗುತ್ತಿದೆ’ ಎಂದರು.

ADVERTISEMENT

ಆತಿಥ್ಯಕ್ಕೆ ಒಪ್ಪಿಗೆ: ಈ ವರ್ಷದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ಹೆಬಸೂರ ಗ್ರಾಮ ವಹಿಸಿಕೊಳ್ಳಲು ಸಿದ್ಧವಿದೆ ಎಂದು ಗ್ರಾಮಸ್ಥರ ಪರವಾಗಿ ಪ್ರಮುಖರು ಒಪ್ಪಿಗೆ ಸೂಚಿಸಿದರು. ಶಿಕ್ಷಕ ಸಂಘಟನೆಗಳ ಪರವಾಗಿ ಅಶೋಕ ಸಜ್ಜನ ಬೆಂಬಲ ಸೂಚಿಸಿದರು.

ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗ್ರಾಮದ ಪ್ರಮುಖರಾದ ವಿ.ಕೆ.ಕುರುಡಗಿ, ಶಿವಾನಂದ ಲದ್ದಿ, ಎಸ್.ಎಸ್. ಬಣವಿ, ಸುರೇಶ ಮುದರಡ್ಡಿ, ಬಸಣ್ಣ ಕಮಡೊಳ್ಳಿ, ಇಮಾಮಸಾಬ ಪೀರಖಾನ್, ಶಿವಾನಂದ ಭೂಮಣ್ಣವರ, ಅಶೋಕ ಮಂಡಿಗನಾಳ, ಯಶವಂತ ಹೊಸಮನಿ, ಮೆಹಬೂಬಸಾಬ ಪೀರಖಾನ, ಗುರುನಾಥ ಹೊಸಮನಿ, ಸಂಗ್ರಾಮಸೇನೆಯ ಅಧ್ಯಕ್ಷ ನಿಂಗಪ್ಪ ಕುರುಬರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.