ADVERTISEMENT

ಕಾವ್ಯ ಜಗಲಿಯಲ್ಲಿ ಕಾವ್ಯ ಮಂಥನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:13 IST
Last Updated 1 ನವೆಂಬರ್ 2022, 6:13 IST
ಹುಬ್ಬಳ್ಳಿ ಕಾಳಿದಾಸ ನಗರದ ನಾಗಸುಧೆ ಕಾವ್ಯ ಜಗಲಿಯಲ್ಲಿ ನಡೆದ ‘ಕವಿ ಕಾವ್ಯ ಮಂಥನ’ ಕಾರ್ಯಕ್ರಮದಲ್ಲಿ ಲೇಖಕಿ ಡಾ. ಭಾರತಿ ಹಿರೇಮಠ ಮಾತನಾಡಿದರು
ಹುಬ್ಬಳ್ಳಿ ಕಾಳಿದಾಸ ನಗರದ ನಾಗಸುಧೆ ಕಾವ್ಯ ಜಗಲಿಯಲ್ಲಿ ನಡೆದ ‘ಕವಿ ಕಾವ್ಯ ಮಂಥನ’ ಕಾರ್ಯಕ್ರಮದಲ್ಲಿ ಲೇಖಕಿ ಡಾ. ಭಾರತಿ ಹಿರೇಮಠ ಮಾತನಾಡಿದರು   

ಹುಬ್ಬಳ್ಳಿ:ಕಳೆದ ಶತಮಾನದ 60, 70 ಮತ್ತು 80ರ ದಶಕದಲ್ಲಿ ಅಸ್ತಿತ್ವವಾದ, ವ್ಯಕ್ತಿವಾದ, ಮಾರ್ಕ್ಸ್‌ವಾದ, ಲೋಹಿಯಾ, ಗಾಂಧಿ ಸೇರಿದಂತೆ ಮುಂತಾದವಾದಗಳು ಜನರನ್ನು ಪ್ರಭಾವಿಸಿದ್ದವು. ನಂತರ ತುರ್ತು ಪರಿಸ್ಥಿತಿ ಎದುರಾಯಿತು. ಈ ಎಲ್ಲ ಸಾಮಾಜಿಕ ಗುಣ–ಧರ್ಮಗಳನ್ನು ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಿ ಅಡಕವಾಗಿರುವುದನ್ನು ಕಾಣಬಹುದು’ ಎಂದು ಡಾ. ಭಾರತಿ ಹಿರೇಮಠ ಅಭಿಪ್ರಾಯಪಟ್ಟರು.

ಇಲ್ಲಿನ ಕಾಳಿದಾಸ ನಗರದ ನಾಗಸುಧೆ ಕಾವ್ಯ ಜಗಲಿಯಲ್ಲಿ ನಡೆದ ‘ಕವಿ ಕಾವ್ಯ ಮಂಥನ’ ಕಾರ್ಯಕ್ರಮದಲ್ಲಿ ಲೇಖಕಿ ಡಾ. ಭಾರತಿ ಹಿರೇಮಠ ಅವರು, ಕವಿ ಗೋಪಾಲಕೃಷ್ಣ ಅಡಿಗರ ಬದುಕು ಬರಹ ಕುರಿತು ಮಾತನಾಡಿದರು. ನಂತರ ಅಡಿಗರ ಆಯ್ದ ಕವಿತೆಗಳಾದ ಕೃತಿ ಮಗು, ಎಲೆ ಕವಿ, ಶೋಷಣೆ, ನೆಲ ಸಪಾಟಿಲ್ಲ, ಸಮಾಜ ಭೈರವ ಕವಿತೆಗಳ ವಾಚನ, ಚರ್ಚೆ, ಸಂವಾದ ನಡೆದವು.

ಕವಿಗಳಾದ ದೇವು ಮಾಕೊಂಡ, ರೂಪಾ ಜೋಶಿ ಮತ್ತು ಶಿವಾನಂದ ಉಳ್ಳಿಗೇರಿ ಅಡಿಗರ ಕವಿತೆಗಳನ್ನು ಪ್ರಸ್ತುತಪಡಿಸಿದರು. ಪ್ರಕಾಶ ಕಡಮೆ ಸ್ವಾಗತಿಸಿದರು. ಸುನಂದಾ ಕಡಮೆ ವಂದಿಸಿದರು. ಎಂ.ಬಿ. ಅಡ್ನೂರ, ಚನ್ನಪ್ಪ ಅಂಗಡಿ, ಸಿ.ಎಂ. ಮುನಿಸ್ವಾಮಿ, ಮಮತಾ ಹೊರಕೇರಿ, ಗಾಯತ್ರಿ ರವಿ, ನಿರ್ಮಲಾ ಶೆಟ್ಟರ್, ವಿರೂಪಾಕ್ಷ ಕಟ್ಟೀಮನಿ, ಶಂಕರಗೌಡ ಸಾತ್ಮಾರ, ಅರುಣಕುಮಾರ ಹಬ್ಬು, ವ್ಯಾಸ ದೇಶಪಾಂಡೆ, ಸುಜಾತಾ ಹೆಬ್ಬಾಳ, ವೈಭವ ಪೂಜಾರಿ, ರವಿಶಂಕರ ಗಡಿಯಪ್ಪನವರ, ಸುರೇಶ ಹೊರಕೇರಿ, ಗುರುಸಿದ್ದಪ್ಪ ಬಡಗೇರ, ರಾಮಚಂದ್ರ ಪತ್ತಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.