ADVERTISEMENT

ಹುಬ್ಬಳ್ಳಿಯಲ್ಲಿ ಕೆಜಿಎಫ್‌ ಹವಾ: ಯಶ್‌ ಕಟೌಟ್‌ಗೆ ಹಾಲಿನ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 10:31 IST
Last Updated 21 ಡಿಸೆಂಬರ್ 2018, 10:31 IST
ಹುಬ್ಬಳ್ಳಿಯ ಸುಜಾತಾ ಚಿತ್ರಮಂದಿರದ ಎದುರು ಕೆಜಿಎಫ್‌ ಸಿನಿಮಾ ನೋಡಲು ಸೇರಿದ್ದ ವೀಕ್ಷಕರು
ಹುಬ್ಬಳ್ಳಿಯ ಸುಜಾತಾ ಚಿತ್ರಮಂದಿರದ ಎದುರು ಕೆಜಿಎಫ್‌ ಸಿನಿಮಾ ನೋಡಲು ಸೇರಿದ್ದ ವೀಕ್ಷಕರು   

ಹುಬ್ಬಳ್ಳಿ: ಚಿತ್ರನಟ ಯಶ್‌ ತಾರಾಗಣವಿರುವ ಬಹುನಿರೀಕ್ಷಿತ ಕೆಜಿಎಫ್‌ ಚಿತ್ರವು ನಗರದ ಸುಜಾತಾ, ಅಪ್ಸರಾ ಹಾಗೂ ಪಿವಿಆರ್‌ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ಪ್ರದರ್ಶನಕ್ಕೇ ಪ್ರೇಕ್ಷಕರು ಸಾಲುಗಟ್ಟಿ ಸಿನಿಮಾ ವೀಕ್ಷಿಸಿದರು.

ಅಪ್ಸರಾ ಚಿತ್ರಮಂದಿರದ ಮುಂಭಾಗದಲ್ಲಿ ಅಳವಡಿಸಿದ್ದ ಯಶ್ ಕಟೌಟ್‌ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಸುಜಾತಾ ಚಿತ್ರಮಂದಿರದಲ್ಲಿ ಹೌಸ್‌ಫುಲ್‌ ಆಗಿದ್ದು, ಅಭಿಮಾನಿಗಳು ಗಂಟೆಗಟ್ಟಲೇ ಕಾಯ್ದು ಟಿಕೆಟ್‌ ಪಡೆದು ತಮ್ಮ ನೆಚ್ಚಿನ ಸಿನಿಮಾ ವೀಕ್ಷಿಸಿದರು.

ಪಿವಿಆರ್‌ ಚಿತ್ರಮಂದಿರದಲ್ಲಿ ಬೆಳಿಗ್ಗೆ 8ರಿಂದ ಒಟ್ಟು ಎಂಟು ಪ್ರದರ್ಶನಗಳಲ್ಲಿ ಕೆಜಿಎಫ್‌ ಸಿನಿಮಾ ಕಂಡಿತು. ಗೋಕುಲ ರಸ್ತೆಯ ಅರ್ಬನ್‌ ಓಯಸಿಸ್‌ ಮಾಲ್‌ನಲ್ಲಿರುವ ಸಿನಿ ಪೊಲಿಸ್‌ನಲ್ಲಿ ಕನ್ನಡ ಅವತರಣಿಕೆಯ ಐದು ಹಾಗೂ ಹಿಂದಿ ಅವತರಣಿಕೆಯ ಒಂದು ಪ್ರದರ್ಶನಗಳು ಕಂಡವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.