ADVERTISEMENT

ಹುಬ್ಬಳ್ಳಿ: ಕೊಟಕ್ ಮಹೀಂದ್ರ ಬ್ಯಾಂಕ್ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2019, 8:37 IST
Last Updated 3 ಮಾರ್ಚ್ 2019, 8:37 IST
   

ಹುಬ್ಬಳ್ಳಿ: ಆಡಳಿತ ಮಂಡಳಿ ನೌಕರ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಟಕ್ ಮಹೀಂದ್ರ ಬ್ಯಾ ನೌಕರರ ಸಂಘದವರು ನಗರದಲ್ಲಿ ಭಾನುವಾರ ರ್ಯಾಲಿ ಹಾಗೂ ಸಭೆ ನಡೆಸಿದರು.

ನಗರದ ವಾಣಿಜ್ಯೋದ್ಯಮ ಸಂಘದ ಮುಂಭಾಗ ಜಮಾಯಿಸಿದ ಸಂಘದ ಸದಸ್ಯರು, ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಲ್ಯಾಮಿಂಗ್ಟನ್ ರಸ್ತೆ ಮೂಲಕ ಸಾಗಿದ ರ್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿ ಮತ್ತೆ ವಾಪಸ್ ವಾಣಿಜ್ಯೋದ್ಯಮ ಸಂಸ್ಥೆ ತಲುಪಿತು.

ಸಂಘದ ಜಂಟಿ ಕಾರ್ಯದರ್ಶಿ ದಯಾನಂದ ಅಂಬರಕರ ಮಾತನಾಡಿ, ಸಂಘದ ಬೇಡಿಕೆಗಳ ಈಡೇರದ ಕಾರಣ ಮಾರ್ಚ್ 25 ಮತ್ತು 26ರಂದು ದೇಶದಾದ್ಯಂತ ಮುಷ್ಕರ ನಡೆಯಲಿದೆ ಎಂದರು.

ADVERTISEMENT

ಕೊಟಕ್ ಮಹೀಂದ್ರ ಬ್ಯಾಂಕ್ ಅನ್ನು ಐಎನ್ ಜಿ ವೈಶ್ಯ ಬ್ಯಾಂಕಿನೊಂದಿಗೆ ವಿಲೀನ ಮಾಡಿಕೊಳ್ಳುವಾಗ ಬ್ಯಾಂಕಿನ ನೌಕರರ ಸಂಘದೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ವನ್ನು ಜಾರಿಗೊಳಿಸುತ್ತಿಲ್ಲ. ವರ್ಗಾವಣೆ ನೀತಿ ಒಪ್ಪಂದ ಉಲ್ಲಂಘನೆಯಾದ ಕಾರಣ ಅಧಿಕಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅರೆಕಾಲಿಕ ಸಿಬ್ಬಂದಿ ಹಾಗೂ ಕ್ಲರ್ಕ್ ಗಳಿಗೆ ಬಡ್ತಿ ನೀಡುತ್ತಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.