ADVERTISEMENT

ಕೆಪಿಎಸ್‌ಸಿ ಪರೀಕ್ಷೆ: ರಮ್ಯಾ ಸಾನು ಉತ್ತೀರ್ಣ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 9:47 IST
Last Updated 26 ಡಿಸೆಂಬರ್ 2019, 9:47 IST
ರಮ್ಯಾ ಸಾನು
ರಮ್ಯಾ ಸಾನು   

ಹುಬ್ಬಳ್ಳಿ: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಇಲ್ಲಿನ ಗೋಕುಲ ರಸ್ತೆ ನಿವಾಸಿ ರಮ್ಯಾ ಸಾನು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಈ ಹಿಂದೆ ರಮ್ಯಾ ಅವರು ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ಆದರೆ, ಯಶಸ್ವಿಯಾಗಿರಲಿಲ್ಲ. ಆದರೆ, ಈಗ ಯಶಸ್ವಿಯಾಗಿದ್ದಾರೆ.

ಕೇಶ್ವಾಪುರದ ಸಾಕ್ರೆಡ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗೆ, ಅಕ್ಷಯ ಕಾಲೊನಿಯ ಚೇತನ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಮತ್ತು ಬಿವಿಬಿ ಕಾಲೇಜಿನಲ್ಲಿ ಇ ಆ್ಯಂಡ್‌ ಇ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಐಚ್ಛಿಕ ವಿಷಯವಾಗಿ ಭೂಗೋಳಶಾಸ್ತ್ರ ತೆಗೆದುಕೊಂಡಿದ್ದರು.

ADVERTISEMENT

‘ಮೂರು ತಿಂಗಳು ಕೋಚಿಂಗ್‌ ಪಡೆದಿದ್ದೆ. ಅದಕ್ಕಿಂತ ಹೆಚ್ಚಾಗಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡು, ಕಟ್ಟುನಿಟ್ಟಾಗಿ ಅಭ್ಯಾಸ ಮಾಡುತ್ತಿದ್ದೆ. 2014ರಲ್ಲಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದಾಗ ಪರೀಕ್ಷೆ ಬರೆದಿದ್ದೆ. ಆಗ ಪೂರ್ವ ಸಿದ್ಧತೆ ಸರಿಯಾಗಿರಲಿಲ್ಲ. ಬರವಣಿಗೆ ಸ್ವಲ್ಪ ನಿಧಾನವಾಗಿದ್ದ ಕಾರಣ, ನಿಗದಿತ ಸಮಯದೊಳಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗಿರಲಿಲ್ಲ. ಆ ತಪ್ಪನ್ನು ತಿದ್ದುಕೊಂಡು ಪೂರ್ವ ಸಿದ್ಧತೆಯೊಂದಿಗೆ ಎರಡನೇ ಬಾರಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ರಮ್ಯಾ ತಿಳಿಸಿದರು.

ರಮ್ಯಾ ಅವರ ತಂದೆ ಮಂಜುನಾಥ ಸಾನು ಉದ್ಯಮಿಯಾಗಿದ್ದು, ತಾಯಿ ಮಂಜುಳಾ ಗೃಹಿಣಿ. ‘ತಂದೆ, ತಾಯಿಯ ಪ್ರೋತ್ಸಾಹ ಹಾಗೂ ಪರಿಶ್ರಮದ ಓದಿನಿಂದ ಸಾಧನೆ ಸಾಧ್ಯವಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.