ADVERTISEMENT

ಕಲಘಟಗಿ | ಕೃಷ್ಣ ಜನ್ಮಾಷ್ಟಮಿ: ಮುಸ್ಲಿಮರೂ ಭಾಗಿ 

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 16:15 IST
Last Updated 26 ಆಗಸ್ಟ್ 2024, 16:15 IST
ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕೆಪಿಎಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ಬಾಂಧವರು ತಮ್ಮ ಮಕ್ಕಳಿಗೆ ಕೃಷ್ಣ–ರಾಧೆ ವೇಷ ತೊಡಿಸಿ ಭಾವೈಕ್ಯ ಮೆರೆದರು 
ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕೆಪಿಎಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ಬಾಂಧವರು ತಮ್ಮ ಮಕ್ಕಳಿಗೆ ಕೃಷ್ಣ–ರಾಧೆ ವೇಷ ತೊಡಿಸಿ ಭಾವೈಕ್ಯ ಮೆರೆದರು    

ಕಲಘಟಗಿ: ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕೆಪಿಎಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿದ್ಯಾರ್ಥಿಗಳು ಬಾಲ- ರಾಧೆ–ಕೃಷ್ಣ ವೇಷಭೂಷಣದಲ್ಲಿ ಮಿಂಚಿದರು.

ಮುಸ್ಲಿಮರೂ ತಮ್ಮ ಮಕ್ಕಳಿಗೆ ಕೃಷ್ಣ, ರಾಧೆ ವೇಷ ತೊಡಿಸಿ ಭಾವೈಕ್ಯ ಮೆರೆದರು.

ಮುದ್ದು ಮಕ್ಕಳು ರಾಧಾ- ಕೃಷ್ಣರಂತೆ ಕಂಡು ಬಂದರು. ಮಕ್ಕಳನ್ನು ನೋಡಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

ADVERTISEMENT

ಕಾರ್ಯಕ್ರಮದಲ್ಲಿ ಪಾಲಕರು ಪೋಷಕರು, ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ನೀಲಮ್ಮ ಜವಳಿ, ಉಮಾ ಪಾಟೀಲ, ಶಾಲೆಯ ಗುರುವೃಂದ, ಎಸ್‌ಡಿಎಂಸಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.