ADVERTISEMENT

ಕುಂದಗೋಳ–ಗದಗ‌ ಬಸ್ ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 14:08 IST
Last Updated 11 ಜೂನ್ 2025, 14:08 IST
ಕುಂದಗೋಳ ಪಟ್ಟಣದಿಂದ ಗದಗಕ್ಕೆ ಬಸ್ ಸಂಚಾರ ಪುನರಾರಂಭವಾಗಿದ್ದು, ತಾಲ್ಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿದರು
ಕುಂದಗೋಳ ಪಟ್ಟಣದಿಂದ ಗದಗಕ್ಕೆ ಬಸ್ ಸಂಚಾರ ಪುನರಾರಂಭವಾಗಿದ್ದು, ತಾಲ್ಲೂಕಿನ ಗುಡೇನಕಟ್ಟಿ ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿದರು   

ಕುಂದಗೋಳ: ಪಟ್ಟಣದಿಂದ ಗದಗಕ್ಕೆ ಬಸ್ ಸಂಚಾರ ಪುನರ್ ಆರಂಭವಾಗಿದ್ದು, ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ  ಗ್ರಾಮಸ್ಥರು ಬಸ್‌ ಅನ್ನು ಅಲಂಕರಿಸಿ, ಪೂಜೆ ಸಲ್ಲಿಸಿದರು.

ಬಸ್‌ ಗದಗದಿಂದ ಮಧ್ಯಾಹ್ನ ಒಂದು ಗಂಟೆಗೆ ಹೊರಟು ಹುಲಕೋಟಿ, ಅಣ್ಣಿಗೇರಿ, ಭದ್ರಾಪುರ, ನಲವಡಿ, ಶಿರಗುಪ್ಪಿ, ಬಂಡಿವಾಡ, ಮಂಟೂರ, ನಾಗರಹಳ್ಳಿ, ಗುಡೇನಕಟ್ಟಿ ಮಾರ್ಗವಾಗಿ ಕುಂದಗೋಳ ತಲುಪಲಿದೆ.  ಮತ್ತೆ ಮಧ್ಯಾಹ್ನ 3 ಗಂಟೆಗೆ ಅದೇ ಮಾರ್ಗದಲ್ಲಿ ಗದಗ ತಲುಪಲಿದೆ.

ತಾಲ್ಲೂಕು ರತ್ನ ಭಾರತ ರೈತ ಸಮಾಜದ ಅಧ್ಯಕ್ಷ ಬಸವರಾಜ ಯೋಗಪ್ಪನವರ ಮಾತನಾಡಿ, ಬಸ್ ಸಂಚಾರ ಪುನರಾರಂಭಿಸುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ್ದರಿಂದ ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ  ಅನುಕೂಲವಾಗಿದೆ ಎಂದರು.

ADVERTISEMENT

ಈ ಸಂದರ್ಭದಲ್ಲಿ ಚೆನ್ನವೀರಸ್ವಾಮಿ ಹಿರೇಮಠ, ಸಂತೋಷ್ ಹಿರಳ್ಳಿ, ಚನ್ನಬಸಪ್ಪ ಸಿದ್ದುನವರ, ತಿರಕಪ್ಪ ಮಲ್ಲಿಗವಾಡ, ಭೀಮಪ್ಪ ಪೂಜಾರ, ಶಿವಾನಂದ ತಂಗ್ಯಮ್ಮನವರ, ಬಸವರಾಜ ಕಮಲದಿನ್ನಿ, ಲಕ್ಷ್ಮವ್ವ ಕಮ್ಮಾರ, ಮಂಜುನಾಥ ಮಲ್ಲಿಗವಾಡ, ನೇಮಚಂದ್ರ ಯೋಗಪ್ಪನವರ, ಕುಸುಮವ್ವ ಮಲ್ಲಿಗವಾಡ, ಯಲ್ಲಪ್ಪ ಕಟ್ಟಿಕಾರ, ಶ್ರೀಕಾಂತ್ ದೇಸಾಯಿ, ಕುಮಾರ ಗುರಿಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.