ADVERTISEMENT

ಕುಂದಗೋಳ: ಕಾಳಜಿ ಕೇಂದ್ರಕ್ಕೆ ಶಾಸಕ ಎಂ.ಆರ್.ಪಾಟೀಲ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 16:03 IST
Last Updated 20 ಅಕ್ಟೋಬರ್ 2024, 16:03 IST
ಬೆಣ್ಷಿಹಳ್ಳ ಪ್ರವಾಹದಿಂದ ತಾಲ್ಲೂಕಿನ ಹಂಚಿನಾಳ ಗ್ರಾಮದ ಸುತ್ತಲಿನ ಜಮೀನುಗಳಿಗೆ ಶಾಸಕ ಎಮ್.ಆರ್.ಪಾಟೀಲ ಬೇಟಿ ನೀಡಿ ಪರಿಶಿಲಿಸಿದರು.
ಬೆಣ್ಷಿಹಳ್ಳ ಪ್ರವಾಹದಿಂದ ತಾಲ್ಲೂಕಿನ ಹಂಚಿನಾಳ ಗ್ರಾಮದ ಸುತ್ತಲಿನ ಜಮೀನುಗಳಿಗೆ ಶಾಸಕ ಎಮ್.ಆರ್.ಪಾಟೀಲ ಬೇಟಿ ನೀಡಿ ಪರಿಶಿಲಿಸಿದರು.   

ಕುಂದಗೋಳ: ಬೆಣ್ಷಿಹಳ್ಳ ಪ್ರವಾಹದಿಂದ ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಮನೆಗೆ ನೀರು ನುಗ್ಗಿ ಕಾಳಜಿ ಕೇಂದ್ರ ದಲ್ಲಿ ಆಶ್ರಯ ಪಡೆದಿರುವ 137 ಜನರನ್ನು ಶಾಸಕ ಎಂ.ಆರ್.ಪಾಟೀಲ ಶನಿವಾರ ಭೇಟಿ ಮಾಡಿ, ಪರಿಸ್ಥಿತಿ ಪರಿಶೀಲನೆ ನಡೆಸಿದರು.

ಇಲ್ಲಿರುವ ಜನರಿಗೆ ಸರಿಯಾದ ವ್ಯವಸ್ಥೆ ಮಾಡಬೇಕು ಹಾಗೂ ರೋಗಗಳು ಬರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ತಾಲ್ಲೂಕು ಪಂಚಾಯಿತಿ ಇಒ ಜಗದೀಶ ಕಮ್ಮಾರ, ತಹಶೀಲ್ದಾರ್‌ ರಾಜು ಮಾವರಕರ ಅವರಿಗೆ ಹೇಳಿದರು.

ನಂತರ ಹಾನಿಯಾದ ಜಮೀನುಗಳಿಗೆ ಬೇಟಿ ನೀಡಿ ಬೇಳೆ ಪರಿಶಿಲಿಸಿ ಶೀಘ್ರವಾಗಿ ಜಂಟಿ ಸಮೀಕ್ಷೆ ಮಾಡಿ ಸರ್ಕಾರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾಲತೇಶ ಶ್ಯಾಗೋಟಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ನಾಗನಗೌಡ ಸಾತ್ಮಾರ, ರವಿಗೌಡ ಪಾಟೀಲ, ಉಮೇಶ ಹೆಬಸೂರ, ಷಣ್ಮುಖ ಐಹೊಳೆ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರೀಶ ಅಮರಗೊಂಡ, ಗ್ರಾ.ಪಂ ಸದಸ್ಯರು , ಅಧಿಕಾರಿಗಳು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.