ಹಳ್ಳದಲ್ಲಿ ಸಿಲುಕಿಕೊಂಡಿರುವ ಟ್ರ್ಯಾಕ್ಟರ್
– ಎ.ಐ ಚಿತ್ರ
ಧಾರವಾಡ: ಕುಂದಗೋಳ ತಾಲ್ಲೂಕಿನ ಹಂಚಿನಾಳ- ದೇವನೂರ ಮದ್ಯದ ಹಂಚಿನಾಳ ಹಳ್ಳದಲ್ಲಿ ಬುಧವಾರ ತಡರಾತ್ರಿ ಟ್ರ್ಯಾಕ್ಟರ್ ಪಲ್ಟಿಯಾಗಿ ವ್ಯಕ್ತಿಯೋರ್ವ ಸಾವಿಗೀಡಾಗಿದ್ದಾರೆ, ಇಬ್ಬರು ಪಾರಾಗಿದ್ದಾರೆ.
ಕುಂದಗೋಳದ ಶಿವಯ್ಯ ವಾಟ್ನಾಳಮಠ (29) ಮೃತಪಟ್ಟವರು. ವಾಸುದೇವ ಹೈಭತ್ತಿ, ಮಲ್ಲಿಕಾರ್ಜುನ ಪಾರಾಗಿದ್ದಾರೆ.
ಬಿತ್ತನೆ ಚಟುವಟಿಕೆಗೆ ಟ್ರ್ಯಾಕ್ಟರ್, ಕೂರಿಗೆ ಒಯ್ಯುವಾಗ ಅವಘಡ ಸಂಭವಿಸಿದೆ.
ನವಲಗುಂದ ತಾಲ್ಲೂಕಿನ ಲ್ಲಿ ಬೆಣ್ಣಿ ಹಳ್ಳ, ತುಪ್ಪರಿಹಳ್ಳ ಸಹಿತ ವಿವಿಧತ ಹಳ್ಳಗಳು ತುಂಬಿ ಹರಿಯುತ್ತವೆ. ಅರೇಕುರಹಟ್ಟಿ ಗ್ರಾಮದಲ್ಲಿ ಮನೆಗಳಿಗೆ ಹಳ್ಳದ ನೀರು ನುಗ್ಗಿದೆ.
ತಿರ್ಲಾಪುರ, ಯಮನೂರ ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಯಮನೂರ ಗ್ರಾಮ ಕೆರೆ ಭರ್ತಿಯಾಗಿದ್ದು ಗೇಟ್ ಮೂಲಕ ನೀರನ್ನು ಹೊರ ಬಿಡಲಾಗಿದೆ. ನವಲಗುಂದ ಪಟ್ಟಣದ ಎಪಿಎಂಸಿ ವಾಣಿಜ್ಯ ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.