ADVERTISEMENT

ಕಲಘಟಗಿ | ಸಾಕುನಾಯಿ ತಿಂದ ಚಿರತೆ: ಗ್ರಾಮಸ್ಥರ ಆತಂಕ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 16:13 IST
Last Updated 16 ಆಗಸ್ಟ್ 2024, 16:13 IST
ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ಜಮೀನನಲ್ಲಿ ಕಂಡು ಬಂದ ಚಿರತೆ ಹೆಜ್ಜೆ 
ಕಲಘಟಗಿ ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ಜಮೀನನಲ್ಲಿ ಕಂಡು ಬಂದ ಚಿರತೆ ಹೆಜ್ಜೆ    

ಕಲಘಟಗಿ: ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದ ರೈತರ ಹೊಲದ ಮನೆಯಲ್ಲಿ ಕಟ್ಟಿದ್ದ ಸಾಕುನಾಯಿಯನ್ನು ಚಿರತೆಯೊಂದು ತಿಂದು ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ.

ಗ್ರಾಮದ ಮಹಾದೇವಪ್ಪ ದೇಸಾಯಿ ಅವರು ಬೆಳಿಗ್ಗೆ ಹೊಲಕ್ಕೆ ತೆರಳಿ ನೋಡಿದಾಗ ಮನೆ ಹೊರಗೆ ಕಟ್ಟಿರುವ ನಾಯಿ ತಿಂದು ಹಾಕಿದ್ದು ಮನೆಯ ಸುತ್ತಮುತ್ತ ಹಾಗೂ ಜಮೀನಿನಲ್ಲಿ ಚಿರತೆ ಹೆಜ್ಜೆಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಹಲವು ದಿನಗಳಿಂದ ತಾಲ್ಲೂಕಿನ ಸುತಗಟ್ಟಿ, ತಬಕದಹೊನ್ನಳ್ಳಿ ಹಾಗೂ ಮಲಕನಕೊಪ್ಪ ಗ್ರಾಮದ ಹೊರವಲಯದ ಗುಡ್ಡಗಾಡುಗಳಲ್ಲಿ ಚಿರತೆ ಕಂಡು ಬರುತ್ತಿರುವದರಿಂದ ರೈತರು ಜಮೀನಿಗೆ ತೆರಳಲು ಭಯ ಪಡುವಂತೆ ಆಗಿದೆ.

ADVERTISEMENT

‘ಕಳೆದ 10 ದಿನಗಳಿಂದ ತಬಕದೊನ್ನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಓಡಾಡುತ್ತಿರುವುದು ಕಂಡು ಬಂದಿದೆ. ನಮ್ಮ ಸಿಬ್ಬಂದಿ ಚಿರತೆಯನ್ನು ಕಾಡಿನತ್ತ ಓಡಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ಉತ್ತಮ ಮಳೆ ಆಗಿರುವುದರಿಂದ ರೈತರು ಜಮೀನುಗಳಲ್ಲಿ ಮೆಕ್ಕೆಜೋಳ, ಕಬ್ಬು ಸೇರಿದಂತೆ ಅನೇಕ ಬೆಳೆ ಬೆಳೆದಿದ್ದಾರೆ. ತೇವಾಂಶದಿಂದ ಆಳೆತ್ತರವಾಗಿ ಬೆಳೆಗಳು ಬೆಳೆದಿದ್ದು, ಚಿರತೆ ಯಾವ ದಿಕ್ಕಿನಲ್ಲಿ ಹೋಗಿದೆ ಎನ್ನುವುದು ಅರಣ್ಯ ಇಲಾಖೆಗೆ ತಿಳಿಯುತ್ತಿಲ್ಲ.

‘ಈ ಭಾಗದ ಪರಿಸರದಲ್ಲಿ ಸಹಜವಾಗಿ ಚಿರತೆಗಳು ಓಡಾಡುವ ತಾಣವಾಗಿದ್ದು, ರೈತರು ಜಮೀನಿಗೆ ತೆರಳುವಾಗ ಎಚ್ಚರಿಕೆಯಿಂದ ಇರಬೇಕು. ಚಿರತೆ ಹೆಜ್ಜೆ, ಜಾಡು ಕಂಡು ಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ’ ಎಂದು ವಲಯ ಅರಣ್ಯಧಿಕಾರಿ ಅರುಣ್ ಅಷ್ಟಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.