ಕಲಘಟಗಿ: ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ನವೀಕರಣ ಕಟ್ಟಡದ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮವ್ವ ಚಟ್ಟಣ್ಣವರ ಸೋಮವಾರ ಭೂಮಿಪೂಜೆ ನೆರೆವೇರಿಸಿದರು.
ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ ಮಾತನಾಡಿ, ಸಚಿವ ಸಂತೋಷ್ ಲಾಡ್ ಅವರ ₹16 ಲಕ್ಷ ವಿಶೇಷ ಅನುದಾನದಲ್ಲಿ ಹಳೆಯ ಗ್ರಂಥಾಲಯ ಕಟ್ಟಡ ನವೀಕರಿಸಿ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಗ್ರಂಥಾಲಯದ ಪುಸ್ತಕ ಓದಿನತ್ತ ಗಮನ ಹರಿಸಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಪಿಡಿಒ ಎ.ಎಚ್.ಮನಿಯಾರ್, ಉಪಾಧ್ಯಕ್ಷ ಸಾದಿಕ್ ಹೆಬ್ಬಾಳ, ಸದಸ್ಯರಾದ ಮಹಾಂತಯ್ಯ ತಡಸಮಠ, ಬಸವರಾಜ ಬದನಿಗಟ್ಟಿ, ಸೋಮು ಕ್ಯಾರವಾಡ, ವಿಠಲ ಜಾಧವ, ಅಣ್ಣಪ್ಪ ದೇಸಾಯಿ, ಸಿದ್ದಮ್ಮ ಹರಿಜನ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.