ADVERTISEMENT

ಕಲಘಟಗಿ: ಲಂಚ ಪಡೆಯುವಾಗ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 15:51 IST
Last Updated 7 ಮಾರ್ಚ್ 2024, 15:51 IST
ಶಿರಸ್ತೇದಾರ್ ಸುರೇಶ ಅಡವಿ
ಶಿರಸ್ತೇದಾರ್ ಸುರೇಶ ಅಡವಿ   

ಕಲಘಟಗಿ: ರೈತರೊಬ್ಬರ ಖಾತೆ ಬದಲಾವಣೆ ಮಾಡಿಕೊಡಲು ₹45 ಸಾವಿರ ಲಂಚ ಪಡೆಯುವಾಗ ತಹಶೀಲ್ದಾರ್‌ ಕಚೇರಿ ಶಿರಸ್ತೇದಾರ್ ಸುರೇಶ ಅಡವಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ಜರುಗಿದೆ.

ತಾಲ್ಲೂಕಿನ ಕೂಡಲಗಿ ಗ್ರಾಮದ ರೈತರಾದ ಮಲ್ಲಿಕಾರ್ಜುನ ಮಹದೇವಪ್ಪ ಕುರುಬರ ಎಂಬ ರೈತರ ಹೊಲದ ಸರ್ವೇ ನಂಬರ್ 86 ಮತ್ತು 160 ರ ಭೂ ನ್ಯಾಯ ಮಂಡಳಿಯ ಆದೇಶದ ಖಾತೆ ಬದಲಾವಣೆ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ರೈತನ ದೂರಿನ ಮೇರೆಗೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಜಿಲ್ಲಾ ಲೋಕಾಯುಕ್ತ ಎಸ್ಪಿ ಶಂಕರ್ ಎಂ. ರಾಗಿ ಮಾರ್ಗದರ್ಶನದಲ್ಲಿ ಸಿಪಿಐ ಬಸಗೌಡ ಪಾಟೀಲ್, ಪ್ರಭುಲಿಂಗಯ್ಯ ಹಿರೇಮಠ, ಟಿ.ಎ ಸೊಪ್ಪಿ, ವಿ.ಎಸ್ ದೇಸಾಯಿಗೌಡ್ರ, ಎಸ್.ಇ ಲಕ್ಕಮ್ಮನವರ, ಎಂ.ಎಂ ಶಿವನಾಯ್ಕರ ಕಾರ್ಯಚರಣೆಯಲ್ಲಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.