ADVERTISEMENT

ಪತಿ ಜೊತೆ ಬದುಕುವೆನೆಂದ ಯುವತಿ: ಲವ್ ಜಿಹಾದ್ ಆರೋಪಕ್ಕೆ ತೆರೆ

ಅಂತರ ಧರ್ಮೀಯ ಪ್ರೇಮ ವಿವಾಹ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 19:42 IST
Last Updated 7 ಏಪ್ರಿಲ್ 2022, 19:42 IST

ಹುಬ್ಬಳ್ಳಿ: ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ, ‘ನಾನು ಮತ್ತೆ ಮನೆಗೆ ವಾಪಸ್ ಹೋಗುವುದಿಲ್ಲ. ಪತಿ ಜೊತೆಯೇ ಬದುಕುತ್ತೇನೆ. ನನ್ನ ಪಾಡಿಗೆ ಬಿಟ್ಟಬಿಡಿ’ ಎಂದು, ತಮ್ಮ ಅಂತರ ಧರ್ಮೀಯ ಪ್ರೇಮ ವಿವಾಹದ ಸುತ್ತ ಎದ್ದಿದ್ದ ‘ಲವ್ ಜಿಹಾದ್’ ಆರೋಪಕ್ಕೆ ತೆರೆ ಎಳೆದರು.

ನಗರದ ಹಳೇ ಹುಬ್ಬಳ್ಳಿಯ ಮುಸ್ಲಿಂ ಯುವಕ ಇಬ್ರಾಹಿಂ ಸೈಯದ್ ಅವರನ್ನು ಉಣಕಲ್‌ನ ಹಿಂದೂ ಯುವತಿ ಸ್ನೇಹಾ ಢಮಾಮಘರ ಅವರು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಫೆ. 11ರಂದು ಮದುವೆಯಾಗಿದ್ದರು.

ವಿಷಯ ತಿಳಿದು ಕುಟುಂಬದವರು, ಸ್ಥಳೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ (ಎಸ್‌ಎಸ್‌ಕೆ) ಸಮುದಾಯ, ವಿಶ್ವ ಹಿಂದೂ ಪರಿಷತ್, ಹಿಂದೂ ಪರಿಷತ್ ಸಂಘಟನೆಗಳ ಕಾರ್ಯಕರ್ತರು ಇಲ್ಲಿನ ಉಪನಗರ ಠಾಣೆ ಎದುರು ಬುಧವಾರ ಎಂಟು ತಾಸು ಪ್ರತಿಭಟನೆ ನಡೆಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.