ADVERTISEMENT

‘ಜೀವನ ಪ್ರೀತಿಯೇ ಬರಹಕ್ಕೆ ಪ್ರೇರಣೆ’

ಬರಹಗಾರರ ಸಂವಾದ ಕಾರ್ಯಕ್ರಮದಲ್ಲಿ ಕಥೆಗಾರ ಎ.ಆರ್. ಮಣಿಕಾಂತ್

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 5:57 IST
Last Updated 14 ನವೆಂಬರ್ 2022, 5:57 IST
ಎ.ಆರ್. ಮಣಿಕಾಂತ್
ಎ.ಆರ್. ಮಣಿಕಾಂತ್   

ಹುಬ್ಬಳ್ಳಿ: ‘ಜೀವನ ಪ್ರೀತಿಯ ಪ್ರೇರಣೆಯಿಂದಾಗಿ ಬರವಣಿಗೆ ಪ್ರಾರಂಭ ಮಾಡಿದೆ. ಜೀವನವು ನೀಡಿದ ಸ್ಫೂರ್ತಿಯಿಂದಾಗಿಯೇ ನನ್ನೊಳಗಿಂದ ಕಥೆಗಳು ಮೂಡಿಬಂದವು’ ಎಂದು ಕಥೆಗಾರ ಎ.ಆರ್. ಮಣಿಕಾಂತ್ ಹೇಳಿದರು.

ರಾಜ್ಯೋತ್ಸವದ ಅಂಗವಾಗಿ ನಗರದ ಸಪ್ನ ಬುಕ್ ಹೌಸ್ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ‘ನನ್ನ, ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪಾ ಅಂದ್ರೆ ಆಕಾಶ, ಭಾವತೀರ ಯಾನ, ಉಭಯ ಕುಶಲೋಪರಿ ಸಾಂಪ್ರತ ಪುಸ್ತಕಗಳು ನಗುವಿನಲ್ಲಿ ನೋವು ಮರೆಮಾಚುವವರಿಗೆ ಹಾಗೂ ಖಿನ್ನತೆಗೊಳಗಾದವರಿಗೆ ಜೀವನ ಪ್ರೀತಿ ಉಕ್ಕಿಸುತ್ತವೆ’ ಎಂದರು.

ಸಪ್ನ ಬುಕ್ ಹೌಸ್ ಶಾಖಾ ವ್ಯವಸ್ಥಾಪಕ ರಘು ಎಂ.ವಿ. ಮತ್ತು ಮಳಿಗೆ ವ್ಯವಸ್ಥಾಪಕಿ ಮೇಘನಾ ರಘು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.