ADVERTISEMENT

ಹುಬ್ಬಳ್ಳಿ: ಮಹಾಲಕ್ಷ್ಮಿ ದೇವಿ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:57 IST
Last Updated 30 ಜುಲೈ 2024, 15:57 IST
ಹುಬ್ಬಳ್ಳಿಯ ವಿದ್ಯಾನಗರ ಆಟೊ ನಿಲ್ದಾಣ ಬಳಿ ಮಂಗಳವಾರ ನಡೆದ ಮಹಾಲಕ್ಷ್ಮಿ ದೇವಿ ಜಾತ್ರೆಯಲ್ಲಿ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು
ಹುಬ್ಬಳ್ಳಿಯ ವಿದ್ಯಾನಗರ ಆಟೊ ನಿಲ್ದಾಣ ಬಳಿ ಮಂಗಳವಾರ ನಡೆದ ಮಹಾಲಕ್ಷ್ಮಿ ದೇವಿ ಜಾತ್ರೆಯಲ್ಲಿ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು   

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರ ಆಟೊ ನಿಲ್ದಾಣದ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವು ಮಂಗಳವಾರ ಸಂಭ್ರಮದಿಂದ ನಡೆಯಿತು. 

ಬೆಳಿಗ್ಗೆ 6ಕ್ಕೆ ದೇವಿಗೆ ಅಲಂಕಾರ ಮಾಡುವ ಮೂಲಕ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ– ಹವನ ಮಾಡಲಾಯಿತು. ಇದೇ ವೇಳೆ ದೇವಿಗೆ ಉಡಿತುಂಬುವ ಕಾರ್ಯಕ್ರಮ. ಸತ್ಯನಾರಾಯಣ ಪೂಜೆ ನಡೆಯಿತು. ಬಳಿಕ ನಗರದ ಪ್ರಮುಖ ಓಣಿಗಳಲ್ಲಿ ದೇವಿಯ ಪಲ್ಲಕ್ಕಿ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. 

ಬೆಳಿಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿದರು. 

ADVERTISEMENT

‘ಜಾತ್ರೆ ಪ್ರಯುಕ್ತ ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು‘ ಎಂದು ಕರ್ನಾಟಕ ಕನ್ನಡ ಸಂಘ ಮುಖಂಡರಾದ ಶ್ರೀಪಾದ ಹುಯಿಲಗೋಳ, ಸುಭಾಸ್, ಸಿದ್ದಣ್ಣ ಸುಣ್ಣದಪುಡಿ ಸೇರಿದಂತೆ ದೇವಸ್ಥಾನದ ಪ್ರಮುಖರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.