ADVERTISEMENT

ಹುಬ್ಬಳ್ಳಿ: ತೀರ್ಥಂಕರರ ಮೂರ್ತಿಗೆ ಮಹಾಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 13:16 IST
Last Updated 24 ಜನವರಿ 2025, 13:16 IST
ಹುಬ್ಬಳ್ಳಿ ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ಹಾಗೂ ಪಂಚಕಲ್ಯಾಣಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಪಾರ್ಶ್ವನಾಥರ 61 ಅಡಿ ಎತ್ತರದ ಬೃಹತ್‌ ಪ್ರತಿಮೆ ಕ್ಷೀರಾಭಿಷೇಕ ನೆರವೇರಿತು 
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ಹಾಗೂ ಪಂಚಕಲ್ಯಾಣಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಪಾರ್ಶ್ವನಾಥರ 61 ಅಡಿ ಎತ್ತರದ ಬೃಹತ್‌ ಪ್ರತಿಮೆ ಕ್ಷೀರಾಭಿಷೇಕ ನೆರವೇರಿತು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಯೋಜಿಸಿರುವ ಪಂಚಕಲ್ಯಾಣಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಪಾರ್ಶ್ವನಾಥರ 61 ಅಡಿ ಎತ್ತರದ ಬೃಹತ್‌ ಪ್ರತಿಮೆಯೊಂದಿಗೆ ಒಂಬತ್ತು ತೀರ್ಥಂಕರರ ಮೂರ್ತಿಗಳಿಗೆ ಮಹಾಮಸ್ತಕಾಭಿಷೇಕ ಜರುಗಿತು.

ಜಲ, ಎಳೆನೀರು, ಕ್ಷೀರ, ಗಂಧ ಸೇರಿ ವಿವಿಧ ಅಭಿಷೇಕಗಳು ಜೈನಮುನಿಗಳ ನೇತೃತ್ವದಲ್ಲಿ ನಡೆದವು. ಮಂತ್ರಘೋಷದ ಜೊತೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮೆರುಗು ನೀಡಿತು. ಉರಿಬಿಸಿಲನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ಮಹಾಮಸ್ತಕಾಭಿಷೇಕ ಕಣ್ತುಂಬಿಕೊಂಡರು.

ಇದಕ್ಕೂ ಮೊದಲು ವೇದಿಕೆ ಮೇಲೆ ಪಾರ್ಶ್ವನಾಥರ ಮೂರ್ತಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮಹಾಮಸ್ತಕಾಭಿಷೇಕ ನೆರವೇರಿಸಿದರು. ‘ವಿಶ್ವಶಾಂತಿಗೆ ಜೈನ ಧರ್ಮದ ತತ್ವ ಪಾಲಿಸಬೇಕಿದೆ. ತೀರ್ಥಂಕರರ ತತ್ವ ಸಾರ್ವಕಾಲಿಕ’ ಎಂದರು. ಕುಂತುಸಾಗರ ಮಹಾರಾಜರು, ಗುಣಧರನಂದಿ ಮಹಾರಾಜರು, ಸುರೇಂದ್ರ ಹೆಗ್ಗಡೆ ಸೇರಿ ಹಲವು ಆಚಾರ್ಯರು ಪಾಲ್ಗೊಂಡಿದ್ದರು.

ADVERTISEMENT
ಹುಬ್ಬಳ್ಳಿ ಸಮೀಪದ ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಪಂಚಕಲ್ಯಾಣಕ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಶುಕ್ರವಾರ ಒಂಬತ್ತು ತೀರ್ಥಂಕರರ ಮೂರ್ತಿಗಳಿಗೆ ಮಹಾಮಸ್ತಕಾಭಿಷೇಕ ಜರುಗಿತು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.