
ಪ್ರಜಾವಾಣಿ ವಾರ್ತೆ
ಕಳಸ ( ಗುಡಗೇರಿ ): ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದ ರೖತ ಈರಣ್ಣ ಬಸಪ್ಪ ದೊಡ್ಡುರ, ನಿಂಗನಗೌಡ ಫಕ್ಕೀರಗೌಡ ಮರಿಗೌಡ್ರ, ಮಹ್ಮದ್ ಹನೀಪ್ ಖಾ ಉಪ್ಪಾರ ಹಾಗೂ ಹಜರೇಸಾಬ ಸೂರಣಗಿ ಅವರು 12 ಎಕರೆ ಹೊಲದಲ್ಲಿ ಬೆಳೆದ ಗೊಂಜಾಳ (ಮೆಕ್ಕೆಜೋಳ) ಬೆಳೆ ಈಚೆಗೆ ಬೆಂಕಿ ತಗುಲಿ ನಾಶವಾಗಿದೆ. ರೈತರ ಮನೆಗೆ ಮಾಜಿ ಶಾಸಕ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಎಸ್.ಅಕ್ಕಿ ಭೇಟಿ ನೀಡಿದರು.
ರೈತರೊಂದಿಗೆ ಮಾತನಾಡಿ ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ. ಸರ್ಕಾರದಿಂದ ಆರ್ಥಿಕ ಸಹಾಯ ಒದಗಿಸುವ ಭರವಸೆ ನೀಡಿದರು.
ಹುಬ್ಬಳ್ಳಿಯಲ್ಲಿ ಆಸ್ಪತ್ರೆಗೆ ದಾಖಲಾದ ರೖತರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ವಕೀಲ ಆರ್. ಎಂ. ಕಮತದ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.