ಅಣ್ಣಿಗೇರಿ: ‘ದೇಶ ಉಳಿಯಬೇಕಾದರೆ ಧರ್ಮದ ಆಚರಣೆ ಕಡ್ಡಾಯವಾಗಿರಬೇಕು. ದೇಶದಲ್ಲಿ ಧರ್ಮ ಉಳಿದರೆ ಮಾತ್ರ ನಾವು ಬದುಕಲು ಸಾಧ್ಯ. ಧರ್ಮದ ಆಚರಣೆಯಿಂದ ಬದುಕು ಕಟ್ಟಿಕೊಳ್ಳಿ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಪಟ್ಟಣದ ಗುದ್ನೇಶ್ವರ ಸ್ವಾಮೀಜಿ ಸುವರ್ಣ ಪುಣ್ಯಸ್ಮರಣೋತ್ಸವದಲ್ಲಿ ಮಂಗಳವಾರ ಅವರು ಮಾತನಾಡಿದರು. ದೇಶಕ್ಕೆ ಶಾಂತಿ-ಸುವ್ಯವಸ್ಥೆ ಬಹಳಷ್ಟು ಅವಶ್ಯಕ ಎಂದರು.
ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ದೇಶ ಉಳಿಯಬೇಕಾದರೆ ಧಾರ್ಮಿಕ ಕಾರ್ಯಗಳು ಮೇಲಿಂದ ಮೇಲೆ ಜರುಗುತ್ತಲೆ ಇರಬೇಕು’ ಎಂದರು.
ಶ್ರೀಮಠದ ಪ್ರಭುಲಿಂಗ ದೇವರು ಗುದ್ನೇಶ್ವರ ಸ್ವಾಮೀಜಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಷಣ್ಮುಖ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ದಾನಿಗಳಿಗೆ ಸನ್ಮಾನಿಸಲಾಯಿತು.
ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಚಂಬಣ್ಣ ಹಾಳದೋಟರ, ನಿಂಗಪ್ಪ ಯಳವತ್ತಿ, ಶಿವಶಂಕರ ಕಲ್ಲೂರ, ವಿರೇಶ ಶಾನುಭೋಗರ, ರವಿರಾಜ ವೇರ್ಣೇಕರ, ಜಗದೀಶ ಅಬ್ಬಿಗೇರಿಮಠ, ಶೇಖಣ್ಣ ಅಂಗಡಿ, ಸಿ.ಸಿ.ಅಕ್ಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.