ADVERTISEMENT

ಹೂಡಿಕೆ ಹೆಸರಲ್ಲಿ ₹7.41 ಲಕ್ಷ ವಂಚನೆ

ಆ್ಯಪ್‌ನಲ್ಲಿ ಹೂಡಿಕೆ ಮಾಡಲು ಆಮಿಷವೊಡ್ಡಿ ವಂಚನೆ; ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಮೇ 2022, 4:05 IST
Last Updated 13 ಮೇ 2022, 4:05 IST

ಹುಬ್ಬಳ್ಳಿ: ಆ್ಯಪ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಆಮಿಷ ತೋರಿಸಿದ ಆನ್‌ಲೈನ್ ವಂಚಕ, ವ್ಯಕ್ತಿಯೊಬ್ಬರಿಂದ ₹7.42 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾನೆ.

ಬ್ರೌಸಿಂಗ್ ಸಂದರ್ಭದಲ್ಲಿ ಆ್ಯಪ್‌ನಲ್ಲಿ ಹೂಡಿಕೆಗೆ ಸಂಬಂಧಿಸಿದ ಜಾಹೀರಾತು ಮೇಲೆ ವ್ಯಕ್ತಿ ಕ್ಲಿಕ್ ಮಾಡಿದ್ದಾರೆ. ಹೂಡಿದ ಮೊತ್ತಕ್ಕಿಂತ ಹೆಚ್ಚಿನ ಲಾಭ ಪಡೆಯಬಹುದು ಎಂದು ಜಾಹೀರಾತಿನಲ್ಲಿ ಇದ್ದಿದ್ದನ್ನು ನಿಜ ಎಂದು ನಂಬಿದ ವ್ಯಕ್ತಿ, ಮೊದಲಿಗೆ ₹749 ಹೂಡಿಕೆ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರ ಬ್ಯಾಂಕ್ ಖಾತೆಗೆ ₹3,475 ಬಂದಿದೆ.

ಇನ್ನೂ ಹೆಚ್ಚಿನ ಮೊತ್ತ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಸಿಗಲಿದೆ ಎಂದು ವಂಚಕ ಆಮಿಷ ತೋರಿಸಿದ್ದಾನೆ. ಅದನ್ನು ನಂಬಿದ ವ್ಯಕ್ತಿ ತನ್ನ ತಾಯಿ ಖಾತೆಯಿಂದ ₹6.91 ಲಕ್ಷ ಮತ್ತು ತಂದೆ ಖಾತೆಯಿಂದ ₹50 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಕ್ರಿಫ್ಟೊ ಕರೆನ್ಸಿ ನೆಪದಲ್ಲಿ ವಂಚನೆ: ಕ್ರಿಫ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಅಪರಿಚಿತ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬರಿಂದ ₹1.50 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾಳೆ.

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಮರಿಯಾ ಎಂಬ ಮಹಿಳೆ ಮಾತನ್ನು
ನಿಜ ಎಂದು ನಂಬಿದ ವ್ಯಕ್ತಿ, ಹೂಡಿಕೆಗಾಗಿ ಗೂಗಲ್ ಪೇ ಮೂಲಕ ಹಂತಹಂತವಾಗಿ ಆಕೆಗೆ ಹಣ ವರ್ಗಾಯಿಸಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರ್ಧಂಬರ್ಧ ಸುಟ್ಟ ಶವ ಪತ್ತೆ

ಕಲಘಟಗಿ: ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಾಯಿ ಇಂಟರ್‌ನ್ಯಾಷನಲ್‌ ಶಾಲೆಯ ಹತ್ತಿರ ಅಪರಿಚಿತ ಮಹಿಳೆಯೊಬ್ಬರ ಶವ ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ.

‘ಮೃತ ಮಹಿಳೆಯ ಕುತ್ತಿಗೆ ಹಿಸುಕಿ, ಕಾಲು ಮುರಿದು ಕೊಲೆ ಮಾಡಿದ ದುಷ್ಕರ್ಮಿಗಳು ಇಲ್ಲಿಗೆ ತಂದು ಸೀಮೆ ಎಣ್ಣೆ ಹಾಗೂ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಸಾಕ್ಷಿ ನಾಶಮಾಡಲು ಪ್ರಯತ್ನ ಮಾಡಿದ್ದಾರೆ’ ಎನ್ನಲಾಗಿದೆ.

ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಿಗಾದರೂ ಪ್ರಕರಣದ ಬಗ್ಗೆ ಮಾಹಿತಿ ಗೊತ್ತಾದರೆ ಪೊಲೀಸ್ ಠಾಣೆಗೆ (08370 284511) ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.