ADVERTISEMENT

ಧಾರವಾಡ ಕೃಷಿ ಮೇಳದಲ್ಲಿ ವಾಹನ ಇಳಿಸುವಾಗ ಬಿದ್ದು ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:53 IST
Last Updated 13 ಸೆಪ್ಟೆಂಬರ್ 2025, 6:53 IST
   

ಧಾರವಾಡ: ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ತಂದಿರುವ ಮಿನಿ ಟ್ರಾಕ್ಟರ್ ಅನ್ನು ವಾಹನದಿಂದ ಇಳಿಸುವಾಗ ಬಿದ್ದು ಆರ್.ಪರಶುರಾಮ ಎನ್ನುವರು (58) ಮೃತಪಟ್ಟಿದ್ದಾರೆ.

ಪರಶುರಾಮ ಅವರು ತುಮಕೂರು ಜಿಲ್ಲೆಯ ಮನಸಗೇರಿ ಗ್ರಾಮದವರು.

'ವಾಹನದಿಂದ ಟ್ರಾಕ್ಟರ್ ಕೆಳಗಿಳಿಸಲು ಜೋಡಿಸಿದ್ದ ಕಂಬಿ ಮುರಿದು ಅವಘಡ ಸಂಭವಿಸಿದೆ. ಟ್ರಾಕ್ಟರ್ ಬಿದ್ದು ಪರಶುರಾಮ ಮೃತಪಟ್ಟಿದ್ದಾರೆ' ಎಂದು ಪೋಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.